ಅರಮನೆಯೊಳಗೆ ಪ್ರವೇಶಿಸು’ ಎಂದು ಅವ ಳೊಡನೆ ಹೇಳಲಾಯಿತು. ಆಗ ಅವಳು ಅದನ್ನು ಕಂಡಾಗ ಅದೊಂದು ಜಲಾಶಯವೆಂದು ಭಾವಿಸಿ ಇಳಿಯಲಿಕ್ಕಾಗಿ ಕಾಲುಗಳಿಂದ ಇಜಾರನ್ನು ಮೇಲೇರಿಸಿ ಕೊಂಡಳು. ಆಗ ಸುಲೈಮಾನರು ‘ಇದು ಸ್ಪಟಿಕ ನಿರ್ಮಿತ ನುಣುಪಾದ ಅರಮನೆ’ ಎಂದರು. ಆಗ ಅವಳು, ‘ಓ ನನ್ನ ಪ್ರಭೂ, ನಾನು ನನ್ನ ಮೇಲೆಯೇ ಅಕ್ರಮವೆಸಗಿದೆ. ನಾನು ಸುಲೈಮಾನರೊಂದಿಗೆ, ಸರ್ವ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೆ ಶರಣಾಗಿದ್ದೇನೆ’ ಎಂದಳು 1.