ಗ್ರಂಥದಿಂದ ಜ್ಞಾನ ಪಡೆದ ವ್ಯಕ್ತಿಯೊಬ್ಬರು,1 ‘ತಾವು ರೆಪ್ಪೆ ಬಡಿಯುವುದಕ್ಕೆ ಮುಂಚೆ ನಾನು ಅದನ್ನು ತರುತ್ತೇನೆ’ ಎಂದರು. ಆಗಲೇ ಆ ಸಿಂಹಾಸನವು ತನ್ನ ಮುಂದೆ ಇಡಲ್ಪಟ್ಟಿರುವುದನ್ನು ಕಂಡಾಗ, ಸುಲೈಮಾನರು ಹೀಗೆ ಹೇಳಿದರು, “ನಾನು ಕೃತಜ್ಞತೆ ತೋರುವೆನೋ, ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲಿಕ್ಕಾಗಿ ಇದು ನನ್ನ ಪ್ರಭುವಿನ ಅನು ಗ್ರಹವಾಗಿರುತ್ತದೆ. ಯಾರು ಕೃತಜ್ಞತೆ ತೋರುತ್ತಾನೆ, ಆತನು ತನಗಾಗಿಯೇ ಕೃತಜ್ಞತೆ ತೋರುತ್ತಾನೆ. ಯಾರು ಕೃತಘ್ನತೆ ತೋರುತ್ತಾರೆ, ನನ್ನ ಪ್ರಭು ನಿರಪೇಕ್ಷನೂ ಉತ್ಕøಷ್ಟನೂ ಆಗಿರುತ್ತಾನೆ”.