ಮೂಸಾ ಹೀಗೆ ಹೇಳಿದರು, “ಹಾಗಾದರೆ ಇಲ್ಲಿಂದ ಹೊರಟು ಹೋಗು. ನಿನ್ನ ಜೀವಮಾನವಿಡೀ “ನನ್ನನ್ನು ಮುಟ್ಟಬೇಡಿರಿ” ಎಂದು ಹೇಳುತ್ತಿರು1. ನಿನಗೆ ನಿಗದಿ ಮಾಡಲಾದ ದಿನವೊಂದಿದೆ. ಅದು ನಿನಗೆ ಉಲ್ಲಂಘಿಸಲ್ಪಡಲಾರದು. ನೀನು ಪೂಜಿಸಿದ ಈ ಆರಾಧ್ಯ ವಸ್ತುವನ್ನು ನೋಡು, ನಾವಿನ್ನು ಇದನ್ನು ಸುಟ್ಟು ಹಾಕಿ, ಆಮೇಲೆ ಅದನ್ನು ಹುಡಿ ಮಾಡಿ ಸಮುದ್ರದಲ್ಲಿ ಹರಡಿ ಬಿಡುವೆವು.