(ಒಂದು ದಿನ) ಅರಸನು, ‘ನಾನು ಸ್ವಪ್ನದಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಬಡಕಲು ಹಸು ಗಳು ತಿನ್ನುತ್ತಿರುವುದನ್ನೂ ಧಾನ್ಯದ ಏಳುತೆನೆ ಗಳು ಹಸಿರಾಗಿದ್ದು ಇತರ ಏಳು ತೆನೆಗಳು ಒಣಗಿರುವುದನ್ನು ಕಂಡಿರುತ್ತೇನೆ. ಓ ನನ್ನ ಆಸ್ಥಾನದ ವರೇ, ನೀವು ಸ್ವಪ್ನಗಳ ಫಲ ಬಲ್ಲವರಾಗಿದ್ದರೆ, ನನಗೆ ಈ ಸ್ವಪ್ನದ ಬಗ್ಗೆ ತೀರ್ಪು ನೀಡಿರಿ’ ಎಂದನು1.