ತಿಳಿಯಿರಿ! ನೀವು (ಯುದ್ಧದಲ್ಲಿ) ಗಳಿಸಿದ ಯಾವುದೇ ವಸ್ತುವಿದ್ದರೂ, ಅದರ ಐದನೇ ಒಂದು ಭಾಗವು ಅಲ್ಲಾಹನಿಗೆ, ಸಂದೇಶವಾಹಕರಿಗೆ, ಅವರ ನಿಕಟ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ನೀಡತಕ್ಕದ್ದು.1 ನೀವು ಅಲ್ಲಾಹನಲ್ಲಿ ಮತ್ತು ಸತ್ಯಾಸತ್ಯ ವಿವೇಚನೆಯ ದಿನದಂದು—ಎರಡು ಬಣಗಳು ಮುಖಾಮುಖಿಯಾದ ದಿನದಂದು—ನಮ್ಮ ದಾಸನಿಗೆ ನಾವು ಅವತೀರ್ಣಗೊಳಿಸಿದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.