ಅಲ್ಲಾಹನನ್ನು ಬೇಟಿಯಾಗಲಿಕ್ಕಿರುವುದನ್ನು ಸುಳ್ಳಾಗಿಸುವವರು ನಷ್ಟ ಹೊಂದಿದರು. ಆ ಘಳಿಗೆಯು ಹಠಾತ್ತನೆ ಬಂದು ಬಿಡುವಾಗ, ಅಯ್ಯೋ, ನಮ್ಮ ಕಷ್ಟವೇ, ಇಹದಲ್ಲಿ ನಾವು ಅಸಡ್ಡೆ ತೋರಿದೆವಲ್ಲಾ ಎಂದು ಗೋಳಿಡುವರು. ಇವರು ತಮ್ಮ ಬೆನ್ನ ಮೇಲೆ ಪಾಪಗಳ ಮೂಟೆಯನ್ನು ಹೊತ್ತುಕೊಳ್ಳುವರು1. ತಿಳಿಯಿರಿ, ಎಷ್ಟು ನಿಕೃಷ್ಟ ಹೊರೆಯನ್ನು ಇವರು ಹೊತ್ತಿರುವರು!