Iniciar sesión
Iniciar sesión
Iniciar sesión
Seleccionar idioma

Húd 11:58 ولما جاء امرنا نجينا هودا والذين امنوا معه برحمة منا ونجيناهم من عذاب غليظ ٥٨

Página 228 · Juz 12

وَلَمَّا
جَآءَ
أَمۡرُنَا
نَجَّيۡنَا
هُودٗا
وَٱلَّذِينَ
ءَامَنُواْ
مَعَهُۥ
بِرَحۡمَةٖ
مِّنَّا
وَنَجَّيۡنَٰهُم
مِّنۡ
عَذَابٍ
غَلِيظٖ
٥٨
ನಮ್ಮ ಆಜ್ಞೆ ಬಂದಾಗ ನಾವು ನಮ್ಮ ಕೃಪೆ ಯಿಂದ ಹೂದರನ್ನೂ ಅವರ ಮೇಲೆ ವಿಶ್ವಾಸ ವಿರಿಸಿದವರನ್ನೂ ರಕ್ಷಿಸಿದೆವು ಮತ್ತು ನಾವು ಅವ ರನ್ನು ಕಠಿಣ ಶಿಕ್ಷೆಯಿಂದ ಪಾರುಗೊಳಿಸಿದೆವು
reading-goal:continue-reading

Leer q-and-a.tafsir

Ibn Kathir (Abridged)

وَيَسْتَخْلِفُ رَبِّى قَوْمًا غَيْرَكُمْ

(My Lord will make another people succeed you, ) This refers to a group of people who will worship Allah alone, without associating anything with Him. This also implies that the polytheists do not bother Allah and they do not harm Him in the least with their d

…

وَيَسْتَخْلِفُ رَبِّى قَوْمًا غَيْرَكُمْ

(My Lord will make another people succeed you, ) This refers to a group of people who will worship Allah alone

…
Ver tafsirs

Leer related-content

50. `ಆದ್’ ಜನಾಂಗದೆಡೆಗೆ ಅವರ ಬಂಧು ಹೂದರನ್ನು ನಾವು ಕಳುಹಿಸಿದೆವು. ಅವರು ಹೀಗೆಂದರು, ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹ ನನ್ನು ಆರಾಧಿಸಿ. ಅವನ ಹೊರತು ಇನ್ನಾವ ಆರಾಧ್ಯನೂ ನಿಮಗಿಲ್ಲ. ನೀವು ಕೇವಲ ಸುಳ್ಳು ಸೃಷ್ಟಿ ಮಾಡಿ ಕೊಂಡಿರುತ್ತೀರಿ. 51. ಓ ನನ್ನ ಜನಾಂಗ ಬಾಂಧವರೇ, ಇದರ ಹೆಸರಲ್ಲಿ ನಾನು ನಿಮ್ಮಿಂದೇನೂ ಪ್ರತಿಫಲ ಕೇಳುವುದಿಲ್ಲ. ನನ್ನ ಪ್ರತಿಫಲವು ನನ್ನನ್ನು ಸೃಷ್ಟಿಸಿದವನ ಬಳಿ ಇದೆ. ನೀವು ಯೋಚಿಸುವುದಿಲ್ಲವೇ? 52. ಓ ನನ್ನ ಜನಾಂಗ ಬಾಂಧವರೇ, ನಿಮ್ಮ ಪ್ರಭು ವಿನೊಡನೆ ಕ್ಷಮೆ ಯಾಚಿಸಿರಿ ಮತ್ತು ಪಶ್ಚಾತ್ತಾ ಪಪಟ್ಟು ಆತನ ಕಡೆಗೆ ಮರಳಿರಿ. ಅವನು ನಿಮ್ಮ ಮೇಲೆ ಆಕಾಶದಿಂದ ಸಮೃದ್ಧವಾಗಿ ಮಳೆ ಸುರಿ ಸುವನು ಮತ್ತು ನಿಮ್ಮ ಶಕ್ತಿಗೆ ಇನ್ನಷ್ಟು ಶಕ್ತಿಯ ನ್ನು ಹೆಚ್ಚಿಸಿ ಕೊಡುವನು. ಅಪರಾಧಿಗಳಾಗಿ ವಿಮುಖರಾಗಬೇಡಿರಿ. 53. ಅವರು ಹೇಳಿದರು; ಓ ಹೂದ್, ನೀವು ನಮ್ಮ ಬಳಿಗೆ ಸ್ಪಷ್ಟ ಪುರಾವೆಯನ್ನೇನೂ ತಂದಿಲ್ಲ. ನಿಮ್ಮ ಮಾತನ್ನು ಕೇಳಿ ನಾವು ನಮ್ಮ ದೇವ ರುಗಳನ್ನು ತ್ಯಜಿಸಿ ಬಿಡುವವರೇನಲ್ಲ. ನಿಮ್ಮ ಮೇಲೆ ನಾವು ವಿಶ್ವಾಸವಿಡಲಾರೆವು. 54. ನಮ್ಮ ದೇವರುಗಳ ಪೈಕಿ ಕೆಲವು ದೇವರುಗಳ ಅವಕೃಪೆಗೆ ತುತ್ತಾಗಿ ನಿನ್ನ ಬುದ್ಧಿ ಕೆಟ್ಟಿದೆ ಎಂದೇ ನಮಗೆ ಹೇಳಲಿಕ್ಕಿರುವುದು. ಹೂದ್ ಹೇಳಿದರು: ನಾನು ಅಲ್ಲಾಹನ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ನೀವೂ ಇದಕ್ಕೆ ಸಾಕ್ಷಿಗಳಾಗಿರಿ ನೀವು ಅಲ್ಲಾಹನ ಹೊರತು ದೇವತ್ವದಲ್ಲಿ ಪಾಲುದಾರರಾಗಿಸಿ ಕೊಂ ಡಿರುವ ಎಲ್ಲದರಿಂದ ನಾನು ಸಂಬಂಧ ಕಳೆದು ಕೊಂಡಿದ್ದೇನೆ. 55. ಈಗ ನೀವೆಲ್ಲ ಸೇರಿ ನನ್ನ ವಿರುದ್ಧ ಸಂಚು ಹೂಡಿರಿ. ನಂತರ ನನಗೆ ಸ್ವಲ್ಪವೂ ಕಾಲಾವಕಾಶ ಕೊಡಬೇಡಿರಿ . 56. ನಾನು, ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುವ ಅಲ್ಲಾಹನ ಮೇಲೆ ಅಚಲ ಭರವಸೆ ಇಟ್ಟಿದ್ದೇನೆ. ಚಲಿಸುತ್ತಿರುವ ಪ್ರತಿಯೊಂದು ಜೀವಿಯ ಜುಟ್ಟು ಅವನ ಕೈಯಲ್ಲಿದೆ. ನಿಶ್ಚಯವಾಗಿಯೂ ನನ್ನ ಪ್ರಭು ಸ್ಥಿರವಾದ ಸನ್ಮಾರ್ಗದಲ್ಲಿದ್ದಾನೆ. 57. ನೀವು ವಿಮುಖರಾಗುವುದಾದರೆ, ನಾನು ಯಾವ ಸಂದೇಶವನ್ನು ಕೊಟ್ಟು ನಿಮ್ಮ ಬಳಿಗೆ ಕಳುಹಿ ಸಲ್ಪಟ್ಟಿದ್ದೆನೋ ಅದನ್ನು ನಾನು ನಿಮಗೆ ತಲುಪಿ ಸಿದ್ದೇನೆ. ಇನ್ನು ನನ್ನ ಪ್ರಭು ಇನ್ನೊಂದು ಜನಾಂಗವನ್ನು ನಿಮ್ಮ ಉತ್ತರಾಧಿಕಾರಿಯಾಗಿ ಎಬ್ಬಿಸುವನು. ನೀವು ಅವನಿಗೆ ಯಾವ ಹಾನಿಯನ್ನೂ ಮಾಡಲಾರಿರಿ. ಖಂಡಿತವಾಗಿಯೂ ನನ್ನ ಪ್ರಭು ಸಕಲ ವಸ್ತುಗಳ ಸಂರಕ್ಷಕನು. 58. ನಮ್ಮ ಆಜ್ಞೆ ಬಂದಾಗ ನಾವು ನಮ್ಮ ಕೃಪೆ ಯಿಂದ ಹೂದರನ್ನೂ ಅವರ ಮೇಲೆ ವಿಶ್ವಾಸ ವಿರಿಸಿದವರನ್ನೂ ರಕ್ಷಿಸಿದೆವು ಮತ್ತು ನಾವು ಅವ ರನ್ನು ಕಠಿಣ ಶಿಕ್ಷೆಯಿಂದ ಪಾರುಗೊಳಿಸಿದೆವು 59. ಇವರೇ ಆದ್ ಜನಾಂಗದವರು. ಇವರು ತಮ್ಮ ಪ್ರಭುವಿನ ನಿದರ್ಶನಗಳನ್ನು ನಿಷೇಧಿಸಿದರು, ಅವನ ದೂತರುಗಳನ್ನು ಧಿಕ್ಕರಿಸಿದರು. ಹಠವಾದಿಗಳಾದ ಎಲ್ಲ ಸ್ವೇಚ್ಛಾಧಿಪತಿಗಳ ಆದೇಶವನ್ನು ಅವರು ಅನುಸರಿಸಿದರು. 60. ಇಹಲೋಕದಲ್ಲಿಯೂ ಪುನರುತ್ಥಾನ ದಿನದಲ್ಲೂ ಶಾಪ ಅವರನ್ನು ಹಿಂಬಾಲಿಸುವುದು. ತಿಳಿದಿರಲಿ. ಆದ್ ಜನಾಂಗವು ತನ್ನ ಪ್ರಭುವನ್ನು ನಿರಾಕರಿಸಿತು. ತಿಳಿದಿರಲಿ! ಹೂದ್‍ರ ಜನಾಂಗದವರಾದ ಆದ್ ದೇವಾನುಗ್ರಹದಿಂದ ದೂರವಾಗಿದೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir