ಕುರುಡ, ಕುಂಟ, ರೋಗಿ ಮುಂತಾದವರಿಗೆ (ವಿನಾಯಿತಿಯಿರುವವರಿಗೆ) ಮತ್ತು ಸ್ವತಃ ನಿಮಗೂ—ನೀವು ನಿಮ್ಮ ಮನೆಗಳಲ್ಲಿ, ನಿಮ್ಮ ತಂದೆಯಂದಿರ ಮನೆಗಳಲ್ಲಿ, ನಿಮ್ಮ ತಾಯಂದಿರ ಮನೆಗಳಲ್ಲಿ, ನಿಮ್ಮ ಸಹೋದರರ ಮನೆಗಳಲ್ಲಿ, ನಿಮ್ಮ ಸಹೋದರಿಯರ ಮನೆಗಳಲ್ಲಿ, ನಿಮ್ಮ ತಂದೆಯ ಸಹೋದರರ ಮನೆಗಳಲ್ಲಿ, ನಿಮ್ಮ ತಂದೆಯ ಸಹೋದರಿಯರ ಮನೆಗಳಲ್ಲಿ, ನಿಮ್ಮ ತಾಯಿಯ ಸಹೋದರರ ಮನೆಗಳಲ್ಲಿ, ನಿಮ್ಮ ತಾಯಿಯ ಸಹೋದರಿಯರ ಮನೆಗಳಲ್ಲಿ, ಕೀಲಿಕೈಗಳು ನಿಮ್ಮ ವಶದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಸ್ನೇಹಿತರ ಮನೆಗಳಲ್ಲಿ ಆಹಾರ ಸೇವಿಸುವುದರಲ್ಲಿ ದೋಷವಿಲ್ಲ.1 ನೀವು ಎಲ್ಲರೂ ಒಟ್ಟಾಗಿ ಆಹಾರ ಸೇವಿಸುವುದರಲ್ಲೂ ಅಥವಾ ಬೇರೆ ಬೇರೆಯಾಗಿ ಸೇವಿಸುವುದರಲ್ಲೂ ನಿಮಗೆ ದೋಷವಿಲ್ಲ. ಆದರೆ ನೀವು ಮನೆಯನ್ನು ಪ್ರವೇಶಿಸುವಾಗ ಮನೆಯವರಿಗೆ ಸಲಾಂ ಹೇಳಿರಿ. ಅಲ್ಲಾಹನ ಕಡೆಯ ಸಮೃದ್ಧವಾದ ಮತ್ತು ಪರಿಶುದ್ಧವಾದ ಪ್ರಾರ್ಥನೆಯೆಂಬ ನೆಲೆಯಲ್ಲಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.