(ಪೈಗಂಬರರೇ,) ಸತ್ಯವಿಶ್ವಾಸಿನಿಯರಿಗೆ ಹೇಳಿರಿ. ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ. ತಮ್ಮ ಸೌಂದರ್ಯದಿಂದ ಪ್ರಕಟವಾಗುವ ಭಾಗ ವನ್ನು ಹೊರತುಪಡಿಸಿ ತೋರಿಸದಿರಲಿ1. ತಮ್ಮ ಎದೆಯ ಮೇಲೆ ತಮ್ಮ ಮುಖ ಪರದೆಯನ್ನು ಎಳೆದು ಹಾಕಲಿ 2. ಪತಿಯರು, ತಂದೆಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, 3 ತಮ್ಮ ದಾಸಿಯರು, ಯಾವುದೇ ಲೈಂಗಿಕ ಮೋಹ ವಿಲ್ಲದ ಅಧೀನ ಸೇವಕರು ಮತ್ತು ಇನ್ನೂ ಸ್ತ್ರೀಯರ ಗೋಪ್ಯತೆಯ ಬಗ್ಗೆ ಅರಿಯುವ ಪ್ರಾಯ ವಾಗದ ಮಕ್ಕಳು, ಇವಿಷ್ಟು ಜನರನ್ನು ಹೊರತು ಪಡಿಸಿ ಇನ್ನಾರಿಗೂ ತಮ್ಮ ಸೌಂದರ್ಯವನ್ನು ತೋರ್ಪಡಿಸದಿರಲಿ. ಅವರು, ತಾವು ಮುಚ್ಚಿಟ್ಟ ಅಲಂಕಾರವನ್ನು ತಿಳಿಯುವಂತೆ ತಮ್ಮ ಪಾದಗಳನ್ನು ಬಡಿದು ನಡೆಯದಿರಲಿ. ಸತ್ಯ ವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ನಿಮಗೆ ಯಶಸ್ಸು ಪ್ರಾಪ್ತವಾದೀತು.