ನಿಮ್ಮ ಪೈಕಿ ಯಾರು ಹೆಚ್ಚು ಚೆನ್ನಾಗಿ ಕರ್ಮಾಚರಣೆ ಮಾಡುತ್ತಾನೆ ಎಂದು ಪರೀಕ್ಷಿಸಿ ನೋಡಲಿಕ್ಕಾಗಿ ಅವನು ಮರಣವನ್ನೂ ಜೀವನವನ್ನೂ ಸೃಷ್ಟಿಸಿದವನಾಗಿದ್ದಾನೆ. ಅವನು ಅಜೇಯನೂ ಕ್ಷಮಾಶೀಲನೂ ಆಗಿರುತ್ತಾನೆ.
ಅತಿ ಸಮೀಪದ ಆಕಾಶವನ್ನು ನಾವು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರನ್ನು ಹೊಡೆದಟ್ಟುವ ಸಾಧನವಾಗಿ ಮಾಡಿದ್ದೇವೆ 1. ನಾವು ಆ ಶೈತಾನರಿಗಾಗಿ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುತ್ತೇವೆ.
ಸಿಟ್ಟಿನಿಂದ ಅದು ಸಿಡಿಯುವಂತಿರುವುದು. ಪ್ರತಿ ಬಾರಿಯೂ ಒಂದೊಂದು ಕೂಟ ಜನರನ್ನು ಅದರೊಳಗೆ ಹಾಕಲ್ಪಡುವಾಗಲೆಲ್ಲಾ ಅದರ ಕಾವಲುಗಾರರು ಅವರೊಡನೆ, ‘ನಿಮ್ಮ ಬಳಿಗೆ ಎಚ್ಚರಿಕೆ ಕೊಡುವವನಾರೂ ಬಂದಿರಲಿಲ್ಲವೇ ?’ ಎಂದು ಕೇಳುವರು.
ಆಗ ಅವರು ಹೇಳುವರು; ಹೌದು, ಎಚ್ಚರಿಕೆ ಕೊಡುವವರು ಬಂದಿದ್ದರು. ಆದರೆ ನಾವು ಅವರನ್ನು ಸುಳ್ಳಾಗಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತೀರ್ಣಗೊಳಿಸಿಲ್ಲ, ನೀವು ದೊಡ್ಡ ದಾರಿಗೇಡಿನಲ್ಲಿ ಬಿದ್ದಿರುವಿರಿ’ ಎಂದು ನಾವು (ಅವರಲ್ಲಿ) ಹೇಳಿದೆವು.
ನಿಮಗೆ ಭೂಮಿಯನ್ನು ಅಧೀನಗೊಳಿಸಿ ಕೊಟ್ಟವನು ಅವನೇ. ಆದುದರಿಂದ ನೀವು ಅದರ ಪಾಶ್ರ್ವಗಳಲ್ಲಿ ನಡೆದಾಡಿರಿ ಮತ್ತು ಅಲ್ಲಾಹನ ಆಹಾರದಿಂದ ನೀವು ಭುಜಿಸಿರಿ. ಪುನಃ (ಜೀವಂತರಾಗಿ) ಮರಳುವುದು ಅವನ ಬಳಿಗೇ ಆಗಿದೆ.
ಅಥವಾ ಆಕಾಶದಲ್ಲಿ (ಆಧಿಪತ್ಯ) ಹೊಂದಿರುವನು ನಿಮ್ಮ ಮೇಲೆ ಒಂದು ಕಲ್ಲು ಮಳೆಯನ್ನು ಕಳುಹಿಸಿ ಬಿಡುವ ಕುರಿತು ನೀವು ನಿರ್ಭಿತರಾಗಿರುವಿರಾ? ನನ್ನ ಮುನ್ನೆಚ್ಚರಿಕೆ ಹೇಗಿರುತ್ತದೆಂಬುದು ಆಗ ನಿಮಗೆ ತಿಳಿದು ಬರುವುದು.
ತಮ್ಮ ಮೇಲೆ ಪಕ್ಷಿಗಳು ರೆಕ್ಕೆ ಬಿಚ್ಚಿಕೊಂಡೂ ಮಡಚಿಕೊಂಡೂ ಹಾರಾಡುತ್ತಿರುವುದನ್ನು ಅವರು ನೋಡುತ್ತಿಲ್ಲವೇ ? ಪರಮದಯಾಮಯನ ಹೊರತು ಅವುಗಳನ್ನು ಹಿಡಿದಿರಿಸಿಕೊಳ್ಳುವವರು ಬೇರಾರೂ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಕಾಣುವವನೇ ಆಗಿದ್ದಾನೆ.
(ಸಂದೇಶವಾಹಕರೇ), ಹೇಳಿರಿ; ನಿಮ್ಮನ್ನು ಸೃಷ್ಟಿಸಿದವನೂ ನಿಮಗೆ ಶ್ರವಣ ಮತ್ತು ದೃಷ್ಟಿಗಳನ್ನು ಹಾಗೂ ಹೃದಯಗಳನ್ನು ನೀಡಿದವನೂ ಅವನೇ ಆಗಿರುವನು. ಆದರೆ, ನೀವು ಸ್ವಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ’1.
ಮುಂದೆ ಶಿಕ್ಷೆಯು ಸಮೀಪವಾಗಿರುವುದನ್ನು ಅವರು ಕಂಡಾಗ, ಸತ್ಯನಿಷೇಧಿಗಳ ಮುಖಗಳಿಗೆ ಮ್ಲಾನತೆ ಬಾಧಿಸುವುದು. ನೀವು (ಇಲ್ಲವೆಂದು) ವಾದಿಸುತ್ತಿದ್ದ ವಿಚಾರವು ಇದುವೇ ಆಗಿದೆ’ ಎಂದು (ಅವರಿಗೆ) ಹೇಳಲಾಗುವುದು1.
ಹೇಳಿರಿ; (ಪ್ರವಾದಿಯವರೇ,) ನೀವು ಯೋಚಿಸಿದ್ದೀರಾ? ನನ್ನನ್ನು ಮತ್ತು ನನ್ನ ಜೊತೆಗಿರುವವರನ್ನು ಅಲ್ಲಾಹನು ಶಿಕ್ಷಿಸಿದರೆ ಅಥವಾ ನಮ್ಮಲ್ಲಿ ಕರುಣೆ ತೋರಿಸಿದರೆ (ಈ ಎಡರಡರಲ್ಲೂ ನಿಮಗೇನು ಲಾಭ?) ವೇದನಾಜನಕ ಶಿಕ್ಷೆಯಿಂದ ಸತ್ಯನಿಷೇಧಿಗಳನ್ನು ಯಾರು ರಕ್ಷಿಸುವರು?’
ಹೇಳಿರಿ; ಅವನು ಪರಮ ಕಾರುಣಿಕನು. ನಾವು ಅವನಲ್ಲಿ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಆದರೆ ಸ್ಪಷ್ಟ- ಪಥಭ್ರಷ್ಟತೆಯಲ್ಲಿರುವವನು ಯಾರೆಂದು ಸದ್ಯದಲ್ಲೇ ನಿಮಗೆ ತಿಳಿದುಬರುವುದು’.