وَٱصۡبِرۡ
نَفۡسَكَ
مَعَ
ٱلَّذِينَ
يَدۡعُونَ
رَبَّهُم
بِٱلۡغَدَوٰةِ
وَٱلۡعَشِيِّ
يُرِيدُونَ
وَجۡهَهُۥۖ
وَلَا
تَعۡدُ
عَيۡنَاكَ
عَنۡهُمۡ
تُرِيدُ
زِينَةَ
ٱلۡحَيَوٰةِ
ٱلدُّنۡيَاۖ
وَلَا
تُطِعۡ
مَنۡ
أَغۡفَلۡنَا
قَلۡبَهُۥ
عَن
ذِكۡرِنَا
وَٱتَّبَعَ
هَوَىٰهُ
وَكَانَ
أَمۡرُهُۥ
فُرُطٗا
٢٨
ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಬೆಳ ಗು ಬೈಗುಗಳಲ್ಲಿ ದೇವೋಪಾಸನೆ ಮಾಡುತ್ತಿರುವ ಜನರ ಜತೆಗೆ ನೀವು ಸಹನೆಯೊಂದಿಗೆ ಇರಿ 1. ಇಹಜೀವನದ ಸೊಬಗನ್ನು ಬಯಸಿ ಅವರಿಂದ ತಮ್ಮ ಕಣ್ಣುಗಳು ತಪ್ಪದಿರಲಿ. ನಮ್ಮ ಸ್ಮರಣೆಯಿಂದ ಯಾರ ಹೃದಯವನ್ನು ನಾವು ಅಲಕ್ಷಿಸಿ ದ್ದೇವೆಯೋ ಮತ್ತು ಯಾವನು ತನ್ನಿಚ್ಚೆಯ ಹಿಂದೆ ಬಿದ್ದು ತನ್ನ ಕಾರ್ಯವು ಹತೋಟಿಗೆ ಸಿಗುವುದಿಲ್ಲವೋ ಅಂಥ ವ್ಯಕ್ತಿಯನ್ನು ತಾವು ಅನುಸರಿಸ ಬೇಡಿರಿ 2.