ಆಗ ಅಲ್ಲಾಹನು ಆದಮರನ್ನು ಕರೆದು, ‘ಇವುಗಳ ಹೆಸರುಗಳನ್ನು ಇವರಿಗೆ ಹೇಳಿಕೊಡು’ ಎಂದನು. ಆದಮರು ಅವುಗಳ ನಾಮಗಳನ್ನು ಅವರಿಗೆ ಹೇಳಿಕೊಟ್ಟರು. ಆಗ ಮಲಕ್‍ಗಳಲ್ಲಿ ಅಲ್ಲಾಹನೆಂದನು, ಭುವಿ - ನಭಗಳ ಸರ್ವ ರಹಸ್ಯ ಗಳನ್ನೂ , ನೀವು ಬಹಿರಂಗಗೊಳಿಸುವುದನ್ನೂ ಮರೆಮಾಚುತ್ತಿದ್ದುದನ್ನೂ1 ಬಲ್ಲವನು ನಾನು ಎಂದು ನಿಮಗೆ ನಾನು ಹೇಳಿಲ್ಲವೇ?