ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದುದರಲ್ಲಿ, ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಖ್, ಯಅïಖೂಬ್ ಹಾಗೂ ಅವರ ವಂಶ ಪರಂಪರೆಯವರಿಗೆ ಅವತೀರ್ಣವಾದುದರಲ್ಲಿ, ಮೂಸಾ, ಈಸಾರವರಿಗೂ ಮತ್ತಿತರ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತಿರುವ ಆದರ್ಶಗಳಲ್ಲಿ ನಾವು ವಿಶ್ವಾಸವಿಟ್ಟಿರುವೆವು, ಪ್ರವಾದಿಗಳ ಪೈಕಿ ಯಾರೊಬ್ಬರಿಗೂ ನಾವು ಭೇದ ಬಗೆಯುವುದಿಲ್ಲ1. ನಾವು ಅಲ್ಲಾಹನ ಆದೇಶಕ್ಕೆ ಬದ್ಧರಾಗಿದ್ದೇವೆ’ ಎಂದು ಘೋಷಿಸಿರಿ.