(ಓ ಪೈಗಂಬರರೇ,) ನಿಮ್ಮ ಪ್ರಭು ಆದಮರ ಪೀಳಿಗೆಯಿಂದ ಅವರ ಸಂತತಿಯನ್ನು ಹೊರ ತಂದಿದ್ದ ಹಾಗೂ ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಗಳಾಗಿ ಮಾಡುತ್ತಾ `ನಾನು ನಿಮ್ಮ ಪ್ರಭುವಲ್ಲವೇ?’ ಎಂದು ಕೇಳಿದ್ದ ಸಂದರ್ಭವನ್ನು ಜನರಿಗೆ ನೆನಪಿಸಿರಿ. ಆಗ ಅವರು, ‘ಹೌದು, ಖಂಡಿತವಾಗಿಯೂ ನೀನೇ ನಮ್ಮ ಪ್ರಭು. ನಾವು ಇದಕ್ಕೆ ಸಾಕ್ಷ್ಯವಹಿಸುತ್ತೇವೆ’ ಎಂದರು 1. ನೀವು ಪುನರುತ್ಥಾನ ದಿನದಂದು ‘ನಾವು ಈ ಬಗ್ಗೆ ಅಶೃದ್ಧರಾಗಿದ್ದೆವು’ ಎಂದು ಹೇಳಿ ಬಿಡಬಾರದೆಂದು 2