وَذَرِ
ٱلَّذِينَ
ٱتَّخَذُواْ
دِينَهُمۡ
لَعِبٗا
وَلَهۡوٗا
وَغَرَّتۡهُمُ
ٱلۡحَيَوٰةُ
ٱلدُّنۡيَاۚ
وَذَكِّرۡ
بِهِۦٓ
أَن
تُبۡسَلَ
نَفۡسُۢ
بِمَا
كَسَبَتۡ
لَيۡسَ
لَهَا
مِن
دُونِ
ٱللَّهِ
وَلِيّٞ
وَلَا
شَفِيعٞ
وَإِن
تَعۡدِلۡ
كُلَّ
عَدۡلٖ
لَّا
يُؤۡخَذۡ
مِنۡهَآۗ
أُوْلَٰٓئِكَ
ٱلَّذِينَ
أُبۡسِلُواْ
بِمَا
كَسَبُواْۖ
لَهُمۡ
شَرَابٞ
مِّنۡ
حَمِيمٖ
وَعَذَابٌ
أَلِيمُۢ
بِمَا
كَانُواْ
يَكۡفُرُونَ
٧٠
ತಮ್ಮ ಧರ್ಮವನ್ನು ಆಟ-ವಿನೋದವನ್ನಾಗಿ ಮಾಡಿಕೊಂಡವರು ಮತ್ತು ಇಹಜೀವನದಿಂದ ಮೋಸ ಹೋದವರನ್ನೂ ಬಿಟ್ಟುಬಿಡಿರಿ. ಆದರೆ ಪ್ರತಿಯೊಬ್ಬ ದೇಹಿಯೂ ತನ್ನ ಸ್ವಂತ ಕರ್ಮದ ಫಲವಾಗಿ ನಾಶಕ್ಕೆ ಸಿಲುಕದಂತೆ ಈ ಖುರ್ಆನ್ ಮೂಲಕ ಬೋಧನೆ ನೀಡಿರಿ. ಅಲ್ಲಾಹನ ಹೊರತು ಆ ದೇಹಿಗೆ ಯಾವ ರಕ್ಷಕಮಿತ್ರನೂ ಶಿಫಾರಸು ದಾರನೂ ಇರಲಾರನು. ಅವನು ಪರಿಹಾರವಾಗಿ ಸರ್ವ ದಂಡವನ್ನು ತೆತ್ತರೂ ಅದನ್ನೂ ಅವನಿಂದ ಸ್ವೀಕರಿಸಲಾಗದು. ಏಕೆಂದರೆ ಇಂಥವರು ತಮ್ಮ ಸ್ವಂತ ಗಳಿಕೆಯ ಫಲವಾಗಿ ನಾಶಕ್ಕೆ ತಳ್ಳಲ್ಪಡುವರು. ಅವರಿಗೆ ಅವರ ಸತ್ಯನಿಷೇಧದ ಪ್ರತಿಫಲವಾಗಿ ಕುದಿಯುತ್ತಿರುವ ಪಾನಕ ಮತ್ತು ವೇದನಾಯುಕ್ತ ಶಿಕ್ಷೆ ಕಾದಿದೆ 1.