ಅವರಿಬ್ಬರ ಪೈಕಿ ಬಿಡುಗಡೆಯಾಗುವನೆಂದು ತಾನು ಭಾವಿಸಿದ ವ್ಯಕ್ತಿಯೊಡನೆ ಯೂಸುಫ್‍ರು, ‘ನಿನ್ನ ಪ್ರಭುವಿನ ಬಳಿ ನನ್ನ ಬಗ್ಗೆ ತಿಳಿಸು’ ಎಂದು ಹೇಳಿದರು1. ಆದರೆ ಅವನು ತನ್ನ ಯಜಮಾನ ನೊಡನೆ ಯೂಸುಫರ ಪ್ರಸ್ತಾಪವೆತ್ತಲು ಶೈತಾನ ನು ಅವನಿಗೆ ಮರೆವೆಗೊಳಿಸಿದ್ದನು. ಹೀಗೆ ಅವರು ಅನೇಕ ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.