ಮೂಸಾರವರು ಹೇಳಿದರು, ಓ ನಮ್ಮ ಪ್ರಭೂ, ನೀನು ಫಿರ್‍ಔನ್ ಮತ್ತು ಅವನ ಸರದಾರರಿಗೆ ಲೌಕಿಕ ಜೀವನದಲ್ಲಿ ಅಲಂಕಾರ ಹಾಗೂ ಸಂಪ ತ್ತನ್ನು ಕೊಟ್ಟಿರುವಿ. ಓ ಪ್ರಭೂ, ಈ ಸಿರಿಸಂಪತ್ತು ಅವರು ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸಲು ಕಾರಣವಾಗಿದೆ. ಓ ಪ್ರಭೂ, ಅವರ ಸಂಪತ್ತನ್ನು ನಾಶಪಡಿಸು ಮತ್ತು ಅವರು ವೇದನಾಯುಕ್ತ ಶಿಕ್ಷೆಯನ್ನು ಕಣ್ಣಾರೆ ಕಾಣುವವರೆಗೂ ಅವರು ವಿಶ್ವಾಸವಿರಿಸದಂತೆ ಅವರ ಹೃದಯಗಳ ಮೇಲೆ ಕಾಠಿಣ್ಯ ನೀಡು.