(ಓ ಪೈಗಂಬರರೇ,) ನೀವು ಯಾವುದೇ ಕಾರ್ಯದಲ್ಲಿ ಏರ್ಪಟ್ಟಿದ್ದರೂ ಖುರ್‍ಆನಿನಿಂದ ಅದರ ಬಗ್ಗೆ ಏನನ್ನು ಕೇಳಿಸುತ್ತಿದ್ದರೂ ಮತ್ತು (ಓ, ಜನರೇ,) ನೀವೂ ಯಾವುದೇ ಕರ್ಮವನ್ನು ಮಾಡುತ್ತಲಿದ್ದರೂ ಆ ವೇಳೆ ನಿಮ್ಮ ಮೇಲೆ ಸಾಕ್ಷಿಯಾಗಿ ನಾವು ಇರದೇ ಇಲ್ಲ. ನಿಮ್ಮ ಪ್ರಭುವಿನ ದೃಷ್ಟಿಯಿಂದ ಅಣುತೂಕದಷ್ಟೂ ಮರೆಯಾಗಿಲ್ಲ. ಭೂಮಿಯಲ್ಲೂ ಆಕಾಶದಲ್ಲೂ ಅಣುವಿಗಿಂತ ಸಣ್ಣದಿರಲಿ, ದೊಡ್ಡದಿರಲಿ ಎಲ್ಲವೂ ಸ್ಪಷ್ಟ ಗ್ರಂಥದಲ್ಲಿ ದಾಖಲುಗೊಂಡಿದೆ 1.