ನಮ್ಮ ಸುವ್ಯಕ್ತ ಪುರಾವೆಗಳನ್ನು ಅವರಿಗೆ ಓದಿ ಕೇಳಿಸುವಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯನ್ನಿರಿಸದವರು, ಇದರ ಬದಲಿಗೆ ಇನ್ನೊಂದು ಖುರ್‍ಆನನ್ನು ತನ್ನಿರಿ, ಇಲ್ಲವೆ ಇದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿರಿ ಎಂದು ಹೇಳುತ್ತಾರೆ 1. (ಓ ಪೈಗಂಬರರೇ,) ಹೇಳಿರಿ ನನ್ನ ಕಡೆಯಿಂದ ಅದನ್ನು ಮಾರ್ಪಾಟು ಮಾಡುವುದು ನನಗೆ ಸಲ್ಲದು. ನನಗೆ ಕಳುಹಿಸಲ್ಪಡುವ ಸಂದೇಶಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನು ನನ್ನ ಪ್ರಭುವಿಗೆ ಧಿಕ್ಕಾರ ತೋರಿದರೆ ಒಂದು ಭಯಾನಕ ದಿನದ ಶಿಕ್ಷೆಯನ್ನು ನಾನು ಭಯಪಡುತ್ತೇನೆ.