ಹಾನಿ ಮಾಡಲು, ಅಲ್ಲಾಹನನ್ನು ನಿಷೇಧಿಸಲು, ಸತ್ಯವಿಶ್ವಾಸಿಗಳ ನಡುವೆ ಒಡಕು ಮೂಡಿಸಲು ಮತ್ತು ಈಗಾಗಲೇ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದವರಿಗೆ ಹೊಂಚುದಾಣವನ್ನು ನಿರ್ಮಿಸಿಕೊಡಲು ಒಂದು ಮಸೀದಿಯನ್ನು1 ನಿರ್ಮಿಸಿದವರು ಯಾರೋ—ಅವರು, “ನಾವು ಒಳಿತನ್ನು ಮಾತ್ರ ಉದ್ದೇಶಿಸುತ್ತೇವೆ” ಎಂದು ಆಣೆ ಮಾಡಿ ಹೇಳುತ್ತಾರೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ.