ನಿಮ್ಮ ಮಾತೆಯರು, ನಿಮ್ಮ ಪುತ್ರಿಯರು, ನಿಮ್ಮ ಸಹೋದರಿಯರು, ನಿಮ್ಮ ಪಿತೃ ಸಹೋದರಿಯರು, ನಿಮ್ಮ ಮಾತೃ ಸಹೋದರಿಯರು, ಸಹೋದರ ಪುತ್ರಿಯರು, ಸಹೋದರಿ ಪುತ್ರಿಯರು, ನಿಮಗೆ ಎದೆ ಹಾಲುಣಿಸಿದ ಸಾಕು ತಾಯಂದಿರು, ಸ್ತನಪಾನ ಸಂಬಂಧದ ನಿಮ್ಮ ಸಹೋದರಿಯರು,1 ನಿಮ್ಮ ಪತ್ನಿಯರ ಮಾತೆಯರು, ನೀವು (ದೈಹಿಕ) ಸಂಬಂಧ ಹೊಂದಿದ ನಿಮ್ಮ ಪತ್ನಿಯರಲ್ಲಿ ಉಂಟಾಗಿದ್ದ ನಿಮ್ಮ ಸಂರಕ್ಷಣೆಯಲ್ಲಿರುವ ನಿಮ್ಮ ಸಾಕು ಪುತ್ರಿಯರು ನಿಮಗೆ (ವಿವಾಹ) ನಿಷಿದ್ಧಗೊಳಿ ಸಲಾಗಿದೆ. ಆದರೆ ಅವರೊಂದಿಗೆ (ಮಡದಿಯ ರೊಂದಿಗೆ) 2ಂ ನೀವು ದೇಹ ಸಂಪರ್ಕ ನಡೆಸಿಲ್ಲದಿದ್ದರೆ ಅವರ ಪುತ್ರಿಯರು ನಿಮಗೆ ನಿಷಿದ್ಧವಲ್ಲ. (ಮಡದಿಯನ್ನು ತೊರೆದರೆ ಅವಳ ಪುತ್ರಿ ಸಮ್ಮತ). ನಿಮ್ಮ ಸ್ವಂತ ಪುತ್ರರ ಮಡದಿಯರೂ, ಇಬ್ಬರು ಸಹೋದರಿಯರನ್ನು ನೀವು ಏಕಕಾಲಕ್ಕೆ ಮಡದಿಯರನ್ನಾಗಿ ಇಟ್ಟುಕೊಳ್ಳುವುದೂ (ನಿಮಗೆ ನಿಷಿದ್ಧಗೊಳಿಸಲಾಗಿದೆ). ಹಿಂದೆ ಆಗಿ ಹೋದು ದರ ಹೊರತು. ಖಂಡಿತವಾಗಿಯೂ ಅಲ್ಲಾಹನು ಬಹಳ ಕ್ಷಮಿಸುವವನೂ, ಪರಮ ದಯಾಳುವೂ ಆಗಿರುತ್ತಾನೆ.