ಹೇಳಿರಿ. ಅಲ್ಲಾಹನಲ್ಲಿ ನಾವು ವಿಶ್ವಾಸವಿಟ್ಟೆವು. ನಮಗೆ ಅವತೀರ್ಣವಾದುದರಲ್ಲಿಯೂ ಇಬ್‍ರಾಹೀಮ್, ಇಸ್ಮಾಈಲ್, ಇಸ್ಹಾಖ್, ಯಅïಖೂಬ್ ಹಾಗೂ ಅವರ ಸಂತತಿಗಳಿಗೆ ಅವತೀರ್ಣವಾದುದರಲ್ಲಿಯೂ ಮೂಸಾ, ಈಸಾ ಹಾಗೂ ಇತರೆಲ್ಲ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತುದರಲ್ಲಿಯೂ ನಾವು ವಿಶ್ವಾಸವಿಟ್ಟೆವು. ಅವರಲ್ಲಿ ಯಾರ ಬಗ್ಗೆಯೂ ನಾವು ತಾರತಮ್ಯ ಕಲ್ಪಿಸುವುದಿಲ್ಲ. ನಾವು ಅವನಿಗೆ ಸಂಪೂರ್ಣ ಶರಣಾಗತರು.