(ಓ ಪೈಗಂಬರರೇ,) ಹೇಳಿರಿ. ನನ್ನ ಪ್ರಭು ನ್ಯಾಯಪಾಲನೆಯ ಆಜ್ಞೆಯನ್ನಿತ್ತಿದ್ದಾನೆ1. ಪ್ರತಿಯೊಂದು ಸಾಷ್ಟಾಂಗದ ಸಂದರ್ಭದಲ್ಲಿ ನಿಮ್ಮ ಮುಖಗಳನ್ನು ಸ್ಥಿರಗೊಳಿಸಬೇಕೆಂದೂ2 ಧರ್ಮವನ್ನು (ಶಿರ್ಕ್‍ನಿಂದ) ನಿಷ್ಕಳಂಕಗೊಳಿಸಿ ಅವನನ್ನೇ ಆರಾಧಿಸಬೇಕೆಂದೂ ಅವನ ಆಜ್ಞೆಯಾಗಿರುತ್ತದೆ3. ನಿಮ್ಮನ್ನು ಪ್ರಥಮವಾಗಿ ಹೇಗೆ ಸೃಷ್ಟಿಸಲಾಯಿತೋ ಅದೇ ಸ್ಥಿತಿಯಲ್ಲಿ ನಿಮ್ಮನ್ನು ಮರಳಿಸಲಾಗುವುದು.