وَٱخۡتَارَ
مُوسَىٰ
قَوۡمَهُۥ
سَبۡعِينَ
رَجُلٗا
لِّمِيقَٰتِنَاۖ
فَلَمَّآ
أَخَذَتۡهُمُ
ٱلرَّجۡفَةُ
قَالَ
رَبِّ
لَوۡ
شِئۡتَ
أَهۡلَكۡتَهُم
مِّن
قَبۡلُ
وَإِيَّٰيَۖ
أَتُهۡلِكُنَا
بِمَا
فَعَلَ
ٱلسُّفَهَآءُ
مِنَّآۖ
إِنۡ
هِيَ
إِلَّا
فِتۡنَتُكَ
تُضِلُّ
بِهَا
مَن
تَشَآءُ
وَتَهۡدِي
مَن
تَشَآءُۖ
أَنتَ
وَلِيُّنَا
فَٱغۡفِرۡ
لَنَا
وَٱرۡحَمۡنَاۖ
وَأَنتَ
خَيۡرُ
ٱلۡغَٰفِرِينَ
١٥٥
ನಮ್ಮ ನಿಶ್ಚಿತ ಸಮಯಕ್ಕೆ ಸರಿಯಾಗಿ ತಮ್ಮ ಜನಾಂಗದ ಎಪ್ಪತ್ತು ಮಂದಿಯನ್ನು ಮೂಸಾ ಆರಿಸಿಕೊಂಡರು 1. ಒಂದು ಪ್ರಚಂಡ ಭೂಕಂಪವು ಅವರನ್ನು ಬಾಧಿಸಿದಾಗ ಮೂಸಾರು ಹೀಗೆಂದರು; “ಓ ನನ್ನ ಪ್ರಭೂ, ನೀನಿಚ್ಚಿಸುತ್ತಿದ್ದರೆ ಇವರನ್ನೂ ನನ್ನನ್ನೂ ಈ ಮೊದಲೇ ನಾಶಪಡಿಸಬಹುದಿತ್ತು. ನಮ್ಮ ಪೈಕಿ ಕೆಲವು ತಿಳಿಗೇಡಿಗಳು ಮಾಡಿದ್ದ ಅಪರಾಧಕ್ಕಾಗಿ ನಮ್ಮನ್ನು ನಾಶಗೊಳಿಸುವೆಯಾ? ಇದು ನಿನ್ನ ಪರೀಕ್ಷೆಯೇ ಸರಿ. ನೀನು ಇದರ ಮೂಲಕ ನಿನಗಿಷ್ಟ ಬಂದವರನ್ನು ಪಥಭ್ರಷ್ಟಗೊಳಿಸುತ್ತೀ ಮತ್ತು ನಿನಗಿಷ್ಟ ಬಂದವರಿಗೆ ಸನ್ಮಾರ್ಗದರ್ಶನ ನೀಡುತ್ತೀ. ನೀನೇ ನಮ್ಮ ಉಸ್ತುವಾರಿದಾರನು. ನಮ್ಮನ್ನು ಕ್ಷಮಿಸು. ನಮಗೆ ಕೃಪೆದೋರು, ನೀನು ಕ್ಷಮಿಸುವವರಲ್ಲಿ ಅತಿ ಶ್ರೇಷ್ಠನಾಗಿರುವೆ.