ಓ ಪೈಗಂಬರರೇ, ನೂಹ್1 ಮತ್ತು ಅನಂತರದ ಪ್ರವಾದಿಗಳ ಕಡೆಗೆ ನಾವು ವಹ್ಯ್ ಕಳುಹಿ ಸಿದಂತೆಯೇ ನಿಮ್ಮ ಕಡೆಗೂ ವಹ್ಯ್ ಕಳುಹಿ ಸಿರುತ್ತೇವೆ. ಇಬ್‍ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅïಕೂಬ್ ಹಾಗೂ ಅವರ ವಂಶದವರಿಗೆ ಮತ್ತು ಈಸಾ, ಅಯ್ಯೂಬ್, ಯೂನುಸ್, ಹಾರೂನ್, ಸುಲೈಮಾನ್ ರವರಿಗೂ ವಹ್ಯ್ ಕಳುಹಿಸಿದಂತೆಯೇ. ದಾವೂದರಿಗೆ ನಾವು ಝಬೂರ್ ನೀಡಿದೆವು.