ಫಿರ್‍ಔನನು, “ಆಸ್ಥಾನಿಕರೇ, ನನ್ನ ಹೊರತು ಇನ್ನಾವ ದೇವನೂ ನಿಮಗಿರುವ ಬಗ್ಗೆ ನಾನರಿಯೆನು, 1 ಆದ್ದರಿಂದ ಓ ಹಾಮಾನ್! ನನಗಾಗಿ ಮಣ್ಣಿನ (ಇಟ್ಟಿಗೆ ಮಾಡಿ) ಮೇಲೆ ಬೆಂಕಿ ಉರಿಸು, ನನಗಾಗಿ ಒಂದು ಎತ್ತರವಾದ ಕಟ್ಟಡವನ್ನು ನಿರ್ಮಿಸು. ಮೂಸಾನ ದೇವನನ್ನು ನಾನೊಮ್ಮೆ ಪ್ರತ್ಯಕ್ಷ ನೋಡುತ್ತೇನೆ. (ಬೇರೆ ಆರಾಧ್ಯನಿದ್ದಾನೆ ಎಂಬ ವಾದದಲ್ಲಿ) ಇವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತೇನೆ” ಎಂದನು.