Ingia
Ingia
Ingia
Chagua Lugha

Al-Kahf 18:90 حتى اذا بلغ مطلع الشمس وجدها تطلع على قوم لم نجعل لهم من دونها سترا ٩٠

Ukurasa 303 · Juzuu 16

حَتَّىٰٓ
إِذَا
بَلَغَ
مَطۡلِعَ
ٱلشَّمۡسِ
وَجَدَهَا
تَطۡلُعُ
عَلَىٰ
قَوۡمٖ
لَّمۡ
نَجۡعَل
لَّهُم
مِّن
دُونِهَا
سِتۡرٗا
٩٠
ಎಲ್ಲಿಯವರೆಗೆಂದರೆ, ಅವರು ಸೂರ್ಯೋದಯದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಜನರ ಮೇಲೆ ಉದಯವಾಗುತ್ತಿರುವಂತೆ ಕಂಡರು. ಅದರಿಂದ ಮರೆಯಾಗಲು ನಾವು ಅವರಿಗೆ ಯಾವುದೇ ಪರದೆಯನ್ನು ಮಾಡಿಕೊಟ್ಟಿರಲಿಲ್ಲ.
Endelea Kusoma

Soma Tafsir

Ibn Kathir (Abridged)

His Journey East

Allah tells us that Dhul-Qarnayn then traveled from the west of the earth towards the east. Every time he passed a nation, he subjugated the people and called them to Allah. If they obeyed him, all well and good, otherwise he would humiliate them and take their wealth and possessions

…

His Journey East

Allah tells us that Dhul-Qarnayn then traveled from the west of the earth towards the east. Every time he passed a nation, he subjugat

…
Tazama Tafsir

Soma katika Muktadha

83. (ಪ್ರವಾದಿಯವರೇ) ಅವರು ನಿಮ್ಮಲ್ಲಿ ದುಲ್-ಕರ್ನೈನರ ಬಗ್ಗೆ ಕೇಳುತ್ತಾರೆ. ಹೇಳಿರಿ: “ಅವರ ಬಗ್ಗೆ ನಾನು ನಿಮಗೆ ಸ್ವಲ್ಪ ಓದಿ ಕೊಡುತ್ತೇನೆ.” 84. ನಾವು ಅವರಿಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದ್ದೆವು ಮತ್ತು ಅವರಿಗೆ ಬೇಕಾದ ಎಲ್ಲಾ ಸಾಧನಾನುಕೂಲತೆಗಳನ್ನು ನೀಡಿದ್ದೆವು. 85. ಅವರು ಒಂದು ಮಾರ್ಗವನ್ನು ಹಿಂಬಾಲಿಸಿ ಹೋದರು. 86. ಎಲ್ಲಿಯವರೆಗೆಂದರೆ, ಅವರು ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಕೆಸರು ನೀರಿನ ತೊರೆಯಲ್ಲಿ ಅಸ್ತಮಿಸುವುದನ್ನು ಕಂಡರು. ಆ ತೊರೆಯ ಬಳಿ ಜನರನ್ನೂ ಕಂಡರು. ನಾವು ಹೇಳಿದೆವು: “ಓ ದುಲ್-ಕರ್ನೈನ್! ಒಂದೋ ಇವರನ್ನು ಶಿಕ್ಷಿಸಿ ಅಥವಾ ಅವರ ಬಗ್ಗೆ ಉತ್ತಮ ಸಮೀಪನವನ್ನು ಸ್ವೀಕರಿಸಿ.” 87. ಅವರು ಹೇಳಿದರು: “ಯಾರು ಅಕ್ರಮವೆಸಗುತ್ತಾನೋ ಅವನನ್ನು ನಾವು ಶಿಕ್ಷಿಸುತ್ತೇವೆ. ನಂತರ ಅವನನ್ನು ಅವನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುತ್ತದೆ. ಆಗ ಅವನು ಅವನಿಗೆ ಕಠೋರ ಶಿಕ್ಷೆಯನ್ನು ನೀಡುತ್ತಾನೆ. 88. ಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾನೋ ಅವನಿಗೆ ಅತ್ಯುತ್ತಮ ಪ್ರತಿಫಲವು ದೊರೆಯುತ್ತದೆ. ನಾವು ಅವನಿಗೆ ನಮ್ಮ ಕೆಲಸಗಳಲ್ಲಿ ಸುಲಭವಾಗಿರುವುದನ್ನೇ ಆದೇಶಿಸುತ್ತೇವೆ.” 89. ನಂತರ ಅವರು ಇನ್ನೊಂದು ಮಾರ್ಗವನ್ನು ಹಿಂಬಾಲಿಸಿ ಹೋದರು. 90. ಎಲ್ಲಿಯವರೆಗೆಂದರೆ, ಅವರು ಸೂರ್ಯೋದಯದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಜನರ ಮೇಲೆ ಉದಯವಾಗುತ್ತಿರುವಂತೆ ಕಂಡರು. ಅದರಿಂದ ಮರೆಯಾಗಲು ನಾವು ಅವರಿಗೆ ಯಾವುದೇ ಪರದೆಯನ್ನು ಮಾಡಿಕೊಟ್ಟಿರಲಿಲ್ಲ. 91. ವಿಷಯವು ಈ ರೀತಿಯಾಗಿದೆ. ನಾವು ಅವರ ಬಗೆಗಿನ ಎಲ್ಲಾ ಸಮಾಚಾರಗಳನ್ನು ಆವರಿಸಿಕೊಂಡಿದ್ದೆವು. 92. ನಂತರ ಅವರು ಇನ್ನೊಂದು ಮಾರ್ಗವನ್ನು ಹಿಂಬಾಲಿಸಿ ಹೋದರು. 93. ಎಲ್ಲಿಯವರೆಗೆಂದರೆ, ಅವರು ಎರಡು ಬೆಟ್ಟಗಳ ನಡುವೆ ತಲುಪಿದಾಗ, ಅವುಗಳ ಈಚೆ ಬದಿಯಲ್ಲಿ ಒಂದು ಜನತೆಯನ್ನು ಕಂಡರು. ಅವರಿಗೆ ಮಾತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. 94. ಅವರು ಹೇಳಿದರು: “ಓ ದುಲ್-ಕರ್ನೈನ್! ನಿಶ್ಚಯವಾಗಿಯೂ ಯಾ‌ಜೂಜ್-ಮಾ‌ಜೂಜರು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಿದ್ದಾರೆ. ನಾವು ನಿಮಗೆ ಒಂದು ಖರ್ಚನ್ನು ನಿಗದಿಪಡಿಸಿದರೆ, ನೀವು ನಮ್ಮ ಮತ್ತು ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸಿಕೊಡುವಿರಾ? 95. ದುಲ್-ಕರ್ನೈನ್ ಹೇಳಿದರು: “ನನ್ನ ಪರಿಪಾಲಕನು (ಅಲ್ಲಾಹು) ಏನೆಲ್ಲಾ ನನ್ನ ಅಧಿಕಾರಕ್ಕೆ ನೀಡಿದ್ದಾನೋ ಅದು ಅತ್ಯುತ್ತಮವಾಗಿದೆ. ನೀವು ನಿಮ್ಮ ದೇಹಬಲದಿಂದ ನನಗೆ ಸಹಾಯ ಮಾಡಿರಿ. ನಿಮ್ಮ ಮತ್ತು ಅವರ ನಡುವೆ ನಾನು ಒಂದು ಬಲಿಷ್ಠ ಗೋಡೆಯನ್ನು ನಿರ್ಮಿಸಿಕೊಡುತ್ತೇನೆ.” 96. (ನಂತರ ಅವರು ಹೇಳಿದರು): “ನನಗೆ ಕಬ್ಬಿಣದ ತುಂಡುಗಳನ್ನು ತಂದುಕೊಡಿ.” ಎಲ್ಲಿಯವರೆಗೆಂದರೆ, ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮಗೊಳಿಸಿದಾಗ, ಅವರು ಹೇಳಿದರು: “ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡಿರಿ.” ಎಲ್ಲಿಯವರೆಗೆಂದರೆ, ಆ ಕಬ್ಬಿಣದ ತುಂಡುಗಳು ಸಂಪೂರ್ಣ ಕೆಂಡದಂತಾದಾಗ, ಅವರು ಹೇಳಿದರು: “ನನಗೆ ಕರಗಿಸಿದ ತಾಮ್ರವನ್ನು ತಂದು ಕೊಡಿ. ನಾನು ಅದನ್ನು ಅದಕ್ಕೆ ಸುರಿಯುತ್ತೇನೆ.” 97. ನಂತರ ಆ ಗೋಡೆಯನ್ನು ಏರಿ ಬರಲು ಅವರಿಗೆ (ಯಾ‌ಜೂಜ್-ಮಾ‌ಜೂಜರಿಗೆ) ಸಾಧ್ಯವಾಗಲಿಲ್ಲ. ಅದಕ್ಕೆ ಕನ್ನ ಕೊರೆಯಲೂ ಅವರಿಗೆ ಸಾಧ್ಯವಾಗಲಿಲ್ಲ. 98. ದುಲ್-ಕರ್ನೈನ್ ಹೇಳಿದರು: “ಇದು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ದಯೆಯಾಗಿದೆ. ನನ್ನ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಬಂದರೆ ಅವನು ಅದನ್ನು ನುಚ್ಚುನೂರು ಮಾಡುವನು. ನನ್ನ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಸತ್ಯವಾಗಿದೆ.” 99. (ಅಂದು) ಅವರು ಪರಸ್ಪರ ಉಕ್ಕೇರುವಂತೆ ಅವರನ್ನು ಬಿಟ್ಟುಬಿಡುವೆವು. ಕಹಳೆಯಲ್ಲಿ ಊದಲಾಗುವುದು. ಆಗ ನಾವು ಅವರೆಲ್ಲರನ್ನೂ ಒಟ್ಟಾಗಿ ಸೇರಿಸುವೆವು. 100. ಅಂದು ನಾವು ಸತ್ಯನಿಷೇಧಿಗಳಿಗೆ ನರಕವನ್ನು ನೇರವಾಗಿ ತೋರಿಸುವೆವು. 101. ಅವರು ಯಾರೆಂದರೆ, ಅವರ ಕಣ್ಣುಗಳಿಗೆ ನನ್ನ ನೆನಪು ಬರದಂತೆ ಪರದೆ ಹಾಕಲಾದವರು. ಸತ್ಯಕ್ಕೆ ಕಿವಿಗೊಡಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

- Kannada Translation - Hamza Butur

Endelea Kusoma

Maelezo na Tafakari

Huna maelezo au tafakari yoyote kuhusu aya hii.

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia