ಸತ್ಯನಿಷೇಧ ಕೈಗೊಂಡವರು, ಅಲ್ಲಾಹನ ಮಾರ್ಗದಿಂದ ತಡೆಯುವವರು ಮತ್ತು ಸ್ಥಳೀಯರಿರಲಿ, ಹೊರಗಿನಿಂದ ಬಂದವರಿರಲಿ, ಎಲ್ಲರಿಗೂ ನಾವು ಸಮಾನ ಹಕ್ಕುಗಳನ್ನು ನೀಡಿದ ಮಸ್ಜಿದುಲ್ ಹರಾಮ್‍ನ ಸಂದರ್ಶನದಿಂದ ಜನರನ್ನು ತಡೆ ಯುತ್ತಿರುವವರು ಶಿಕ್ಷಾರ್ಹರು1. ಅಲ್ಲಿ (ಮಸ್ಜಿ ದುಲ್ ಹರಾಮ್‍ನಲ್ಲಿ) ಯಾರಾದರೂ ಅಕ್ರಮ ವಾಗಿ ಅತಿರೇಕವನ್ನು ಬಯಸಿದರೆ, ಅವನಿಗೆ ನಾವು ವೇದನಾಯುಕ್ತ ಶಿಕ್ಷೆಯ ರುಚಿಯನ್ನು ಉಣ್ಣಿಸುವೆವು.