ಅದರ ಕುರಿತಾಗಿ ಸುಲೈಮಾನರಿಗೆ ನಾವು ಮನವರಿಕೆ ಮಾಡಿಕೊಟ್ಟೆವು. ನ್ಯಾಯ ವಿಧಿ ಮತ್ತು ಜ್ಞಾನವನ್ನು ನಾವು ಇಬ್ಬರಿಗೂ ದಯ ಪಾಲಿಸಿದ್ದೆವು1. ನಾವು ದಾವೂದರ ಜೊತೆಗೆ ಅಲ್ಲಾಹನ ಪಾವಿತ್ರ್ಯವನ್ನು ಕೊಂಡಾಡುವ ಸ್ಥಿತಿಯಲ್ಲಿ ಪರ್ವತಗಳನ್ನೂ ಪಕ್ಷಿಗಳನ್ನೂ ಅಧೀನಗೊಳಿಸಿಕೊಟ್ಟೆವು, ಇದನ್ನು ಮಾಡಿದವರು ನಾವೇ ಆಗಿದ್ದೆವು.