ಕೇಳಿರಿ, ಅತ್ಯಂತ ಹಿರಿಯ ಸಾಕ್ಷಿ ಯಾವುದು? ಹೇಳಿರಿ, ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ. ಮತ್ತು ಖುರ್‍ಆನ್ ನಿಮಗೂ ಇನ್ನು ಇದು ಯಾರಿಗೆಲ್ಲ ತಲುಪುವುದೋ ಅವರೆಲ್ಲರಿಗೂ ಎಚ್ಚರಿಕೆ ನೀಡಲಿಕ್ಕಾಗಿ ನನ್ನ ಕಡೆಗೆ ದಿವ್ಯ ಸಂದೇಶವಾಗಿ ನೀಡಲಾಗಿದೆ ಎಂದು ಹೇಳಿರಿ. ಅಲ್ಲಾಹನೊಂದಿಗೆ ಇತರ ಆರಾಧ್ಯರೂ ಇರುವರೆಂದು ನಿಜಕ್ಕೂ ನೀವು ಸಾಕ್ಷ್ಯ ನೀಡ ಬಲ್ಲಿರಾ ? ಅವರಿಗೆ ಹೇಳಿರಿ, ನಾನು ಎಷ್ಟು ಮಾತ್ರ ಕ್ಕೂ ಅದಕ್ಕೆ ಸಾಕ್ಷ್ಯ ಹೇಳಲಾರೆ. ಹೇಳಿರಿ, ನಿಶ್ಚ ಯವಾಗಿಯೂ ಅವನು ಏಕಮಾತ್ರ ಆರಾಧ್ಯನು ಮತ್ತು ನೀವು ಅಲ್ಲಾಹನಿಗೆ ಪಾಲುಗಾರಿಕೆ ಮಾಡು ವುದರಿಂದ ನಾನು ತೀರಾ ಮುಕ್ತನಾ ಗಿದ್ದೇನೆ.