Giriş yap
Giriş yap
Giriş yap
Dil Seçin

Hud 11:103 ان في ذالك لاية لمن خاف عذاب الاخرة ذالك يوم مجموع له الناس وذالك يوم مشهود ١٠٣

Sayfa 233 · Cüz 12

إِنَّ
فِي
ذَٰلِكَ
لَأٓيَةٗ
لِّمَنۡ
خَافَ
عَذَابَ
ٱلۡأٓخِرَةِۚ
ذَٰلِكَ
يَوۡمٞ
مَّجۡمُوعٞ
لَّهُ
ٱلنَّاسُ
وَذَٰلِكَ
يَوۡمٞ
مَّشۡهُودٞ
١٠٣
ಪರಲೋಕದ ಶಿಕ್ಷೆಯನ್ನು ಭಯಪಡುವವರಿಗೆ ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಅದು ಮನುಷ್ಯರೆಲ್ಲರನ್ನೂ ಒಟ್ಟುಗೂಡಿಸುವ ದಿನವಾಗಿದೆ. ಅದು ಎಲ್ಲರೂ ಉಪಸ್ಥಿತರಾಗಿರುವ ದಿನವಾಗಿದೆ.
Devamını Okuyun

Tefsir okuyun.

Ibn Kathir (Abridged)

The Destruction of the Towns is a Proof of the Establishment of the Hour (Judgement)

Allah, the Exalted, is saying that in the destruction of the disbelievers and the salvation of the believers by us is,

لآيَةً

(a sure lesson). This means an admonition and lesson concerning the truthfulness of that

…

The Destruction of the Towns is a Proof of the Establishment of the Hour (Judgement)

Allah, the Exalted, is saying that in the destruction of the disb

…
Görüş Tefsirler

Bağlam içinde okuyun

96. ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳು ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದೆವು. 97. ಫರೋಹ ಮತ್ತು ಅವನ ಜನರ ಮುಖಂಡರ ಬಳಿಗೆ. ಆದರೆ ಅವರು ಫರೋಹನ ಆಜ್ಞೆಯನ್ನು ಹಿಂಬಾಲಿಸಿದರು. ಫರೋಹನ ಆಜ್ಞೆಯು ವಿವೇಚನಾಯುಕ್ತವಾಗಿರಲಿಲ್ಲ. 98. ಪುನರುತ್ಥಾನದ ದಿನದಂದು ಅವನು (ಫರೋಹ) ತನ್ನ ಜನರ ಮುಂಭಾಗದಲ್ಲಿ ನಿಂತು ಅವರನ್ನು ನರಕಕ್ಕೆ ಸಾಗಿಸುವನು. ಅವರನ್ನು ಸಾಗಿಸಲಾಗುವ ಆ ಸ್ಥಳವು ಬಹಳ ನಿಕೃಷ್ಟವಾಗಿದೆ. 99. ಈ ಲೋಕದಲ್ಲೂ ಪುನರುತ್ಥಾನ ದಿನದಲ್ಲೂ ಶಾಪವು ಅವರನ್ನು ಹಿಂಬಾಲಿಸುವುದು. ಅವರಿಗೆ ನೀಡಲಾಗುವ ಆ ಕೊಡುಗೆ ಬಹಳ ನಿಕೃಷ್ಟವಾಗಿದೆ. 100. (ಪ್ರವಾದಿಯವರೇ) ಇವೆಲ್ಲವೂ ಆ ಊರುಗಳ ಕೆಲವು ಸಮಾಚಾರಗಳಾಗಿವೆ. ನಾವು ಇದನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಆ ಊರುಗಳಲ್ಲಿ ಕೆಲವು ಅಸ್ತಿತ್ವದಲ್ಲಿವೆ ಮತ್ತು ಕೆಲವನ್ನು (ಬೇರು ಸಹಿತ) ಕೀಳಲಾಗಿದೆ. 101. ನಾವು ಅವರಿಗೆ ಯಾವುದೇ ಅನ್ಯಾಯ ಮಾಡಲಿಲ್ಲ. ಆದರೆ ಅವರು ಅವರಿಗೇ ಅನ್ಯಾಯ ಮಾಡಿದರು. ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯು ಬಂದಾಗ, ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದ ಅವರ ದೇವರುಗಳಲ್ಲಿ ಯಾರೂ ಕೂಡ ಅವರಿಗೆ ಸ್ವಲ್ಪವೂ ಪ್ರಯೋಜನಕ್ಕೆ ಬರಲಿಲ್ಲ. ಅವರು (ಆ ದೇವರುಗಳು) ಅವರಿಗೆ ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸಿ ಕೊಡುತ್ತಿರಲಿಲ್ಲ. 102. ಅಕ್ರಮವೆಸಗಿದ ಊರುಗಳನ್ನು ಹಿಡಿಯುವಾಗ ನಿಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಹೀಗೆಯೇ ಇರುತ್ತದೆ. ನಿಶ್ಚಯವಾಗಿಯೂ ಅವನ ಹಿಡಿತವು ಯಾತನೆಯಿಂದ ಕೂಡಿದ ಬಲಿಷ್ಠ ಹಿಡಿತವಾಗಿದೆ. 103. ಪರಲೋಕದ ಶಿಕ್ಷೆಯನ್ನು ಭಯಪಡುವವರಿಗೆ ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಅದು ಮನುಷ್ಯರೆಲ್ಲರನ್ನೂ ಒಟ್ಟುಗೂಡಿಸುವ ದಿನವಾಗಿದೆ. ಅದು ಎಲ್ಲರೂ ಉಪಸ್ಥಿತರಾಗಿರುವ ದಿನವಾಗಿದೆ. 104. ಒಂದು ನಿಶ್ಚಿತ ಅವಧಿಯ ತನಕ (ಪುನರುತ್ಥಾನ ದಿನದ ತನಕ) ಮಾತ್ರ ನಾವು ಅದನ್ನು ಮುಂದೂಡುತ್ತೇವೆ. 105. ಆ ಅವಧಿಯು ಬರುವ ದಿನ ಅಲ್ಲಾಹನ ಅಪ್ಪಣೆಯಿಲ್ಲದೆ ಯಾರೂ ಮಾತನಾಡುವುದಿಲ್ಲ. ಅವರಲ್ಲಿ ನತದೃಷ್ಟರು ಮತ್ತು ಅದೃಷ್ಟವಂತರು ಇರುತ್ತಾರೆ. 106. ನತದೃಷ್ಟರು ಯಾರೋ—ಅವರು ನರಕದಲ್ಲಿರುತ್ತಾರೆ. ಅಲ್ಲಿ ಅವರು ಚೀತ್ಕರಿಸುತ್ತಲೂ ಕಿರಿಚಾಡುತ್ತಲೂ ಇರುತ್ತಾರೆ. 107. ಭೂಮ್ಯಾಕಾಶಗಳು ಅಸ್ತಿತ್ವದಲ್ಲಿರುವ ತನಕ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದವರ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವನು ಬಯಸುವುದನ್ನು ಕಾರ್ಯರೂಪಕ್ಕೆ ತರುತ್ತಾನೆ. 108. ಅದೃಷ್ಟವಂತರು ಯಾರೋ—ಅವರು ಸ್ವರ್ಗದಲ್ಲಿರುತ್ತಾರೆ. ಭೂಮ್ಯಾಕಾಶಗಳು ಅಸ್ತಿತ್ವದಲ್ಲಿರುವ ತನಕ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದವರ ಹೊರತು. ಇದು ಅಂತ್ಯವಿಲ್ಲದ ಕೊಡುಗೆಯಾಗಿದೆ. 109. ಇವರು ಆರಾಧಿಸುತ್ತಿರುವ ದೇವರುಗಳ ಬಗ್ಗೆ (ಅವು ಸುಳ್ಳು ಎಂಬ ವಿಷಯದಲ್ಲಿ) ನಿಮಗೆ ಯಾವುದೇ ಸಂಶಯುಂಟಾಗದಿರಲಿ. ಇವರ ಪೂರ್ವಜರು ಹಿಂದೆ ಆರಾಧಿಸುತ್ತಿದ್ದ ರೀತಿಯಲ್ಲೇ ಇವರೂ ಆರಾಧಿಸುತ್ತಿದ್ದಾರೆ. ನಿಶ್ಚಯವಾಗಿಯೂ ನಾವು ಅವರ ಪಾಲನ್ನು ಯಾವುದೇ ಕಡಿತ ಮಾಡದೆ ಅವರಿಗೆ ಪೂರ್ಣವಾಗಿ ನೀಡುವೆವು.

- Kannada Translation - Hamza Butur

Devamını Okuyun

Notlar ve Düşünceler

Bu ayetle ilgili herhangi bir notunuz veya düşünceniz yok.

Notes placeholders

Kur'an'la bağlantınızı koruyun ❤️

Yeniden başlamak, düşünmek ve Kur'an'la bağlantıda kalmak için kısa ve anlamlı hatırlatmalar.

Kuran'ı Oku, Dinle, Araştır ve Üzerinde Düşün

Quran.com, dünya çapında milyonlarca kişinin Kur'an'ı birden fazla dilde okumak, aramak, dinlemek ve üzerinde düşünmek için kullandığı güvenilir bir platformdur. Çeviriler, tefsirler, kıraatler, kelime kelime çeviriler ve derinlemesine inceleme araçları sunarak Kur'an'ı herkes için erişilebilir hale getirir.

Bir Sadaka-i Cariye olarak Quran.com, insanların Kur'an ile derin bir bağ kurmasına yardımcı olmaya kendini adamıştır. 501(c)(3) kar amacı gütmeyen bir kuruluş olan Kur'an Vakfı tarafından desteklenen Quran.com, Elhamdülillah herkes için ücretsiz ve değerli bir kaynak olarak büyümeye devam ediyor.

Keşfedin
Anasayfa
Kuran Radyo
Okuyucular
Hakkımızda
Geliştiriciler
Ürün Güncellemeleri
Geri Bildirim
Yardım
Bağış Yapın
Projelerimiz
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation tarafından sahip olunan, yönetilen veya desteklenen kar amacı gütmeyen projeler
Popüler Bağlantılar
Kur'an'dan Dualar
Günün Kur'an Ayeti
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Site HaritasıGizlilikŞartlar ve koşullar
© 2026 Quran.com. Her hakkı saklıdır
Katkı yapmak