Log masuk
Log masuk
Log masuk
Pilih Bahasa

Asy-Syu'araa' 26:76 انتم واباوكم الاقدمون ٧٦

Halaman 370 · Juz 19

أَنتُمۡ
وَءَابَآؤُكُمُ
ٱلۡأَقۡدَمُونَ
٧٦
ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು?
Teruskan Membaca

Baca Tafsir

Ibn Kathir (Abridged)

How the Close Friend of Allah, Ibrahim spoke out against Shirk

Here Allah tells us about His servant, Messenger and Close Friend, Ibrahim, upon him be peace, the leader of the pure monotheists. Allah commanded His Messenger Muhammad ﷺ to recite this story to his Ummah so that they could follow this e

…

How the Close Friend of Allah, Ibrahim spoke out against Shirk

Here Allah tells us about His servant, Messenger and Close Friend, Ibrahim, upon him be

…
Lihat Tafsir

Baca dalam Konteks

69. ಅವರಿಗೆ ಇಬ್ರಾಹೀಮರ ಸಮಾಚಾರವನ್ನು ಓದಿಕೊಡಿ. 70. ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನರೊಂದಿಗೆ “ನೀವು ಏನನ್ನು ಆರಾಧಿಸುತ್ತಿದ್ದೀರಿ?” ಎಂದು ಕೇಳಿದ ಸಂದರ್ಭ. 71. ಅವರು ಹೇಳಿದರು: “ನಾವು ವಿಗ್ರಹಗಳನ್ನು ಆರಾಧಿಸುತ್ತಿದ್ದೇವೆ ಮತ್ತು ಅವುಗಳ ಮುಂದೆ ಧ್ಯಾನ ಮಾಡುತ್ತಾ ಕೂರುತ್ತೇವೆ.” 72. ಇಬ್ರಾಹೀಮ್ ಕೇಳಿದರು: “ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುತ್ತದೆಯೇ? 73. ಅಥವಾ ಅವರು ನಿಮಗೆ ಉಪಕಾರ ಅಥವಾ ತೊಂದರೆ ಮಾಡುತ್ತಾರೆಯೇ?” 74. ಅವರು ಹೇಳಿದರು: “(ಅದರ ಬಗ್ಗೆ ನಮಗೇನೂ ತಿಳಿದಿಲ್ಲ). ಆದರೆ ನಮ್ಮ ಪೂರ್ವಜರು ಹೀಗೆ ಮಾಡುತ್ತಾ ಬಂದಿದ್ದನ್ನು ನಾವು ನೋಡಿದ್ದೇವೆ.” 75. ಇಬ್ರಾಹೀಮ್ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ ಎಂದು ನೀವು ಆಲೋಚಿಸಿ ನೋಡಿದ್ದೀರಾ? 76. ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು? 77. ನಿಶ್ಚಯವಾಗಿಯೂ ಅವರು (ಆ ದೇವರುಗಳು) ನನ್ನ ವೈರಿಗಳಾಗಿದ್ದಾರೆ; ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹೊರತು. 78. ಅವನು (ಅಲ್ಲಾಹು) ಯಾರೆಂದರೆ, ನನ್ನನ್ನು ಸೃಷ್ಟಿಸಿ ನನಗೆ ದಾರಿ ತೋರಿಸಿದವನು. 79. ನನಗೆ ಆಹಾರ-ಪಾನೀಯಗಳನ್ನು ನೀಡುವವನು. 80. ನನಗೆ ಕಾಯಿಲೆ ಬಂದರೆ ಅವನು ಅದನ್ನು ಗುಣಪಡಿಸುತ್ತಾನೆ. 81. ಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ. 82. ಅವನು ಯಾರೆಂದರೆ, ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಭರವಸೆಯಿಟ್ಟವನು. 83. ನನ್ನ ಪರಿಪಾಲಕನೇ! ನನಗೆ ತೀರ್ಪು ನೀಡುವ ಶಕ್ತಿಯನ್ನು ನೀಡು ಮತ್ತು ನನ್ನನ್ನು ನೀತಿವಂತರಲ್ಲಿ ಸೇರಿಸು. 84. ಮುಂಬರುವ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು. 85. ಸುಖ ಸಂತೋಷಗಳಿಂದ ಕೂಡಿದ ಸ್ವರ್ಗದ ವಾರಸುದಾರರಲ್ಲಿ ನನ್ನನ್ನು ಸೇರಿಸು. 86. ನನ್ನ ತಂದೆಯನ್ನು ಕ್ಷಮಿಸು. ನಿಜಕ್ಕೂ ಅವನು ದಾರಿತಪ್ಪಿದವರಲ್ಲಿ ಸೇರಿದ್ದಾನೆ. 87. ಮನುಷ್ಯರಿಗೆ ಜೀವ ನೀಡಿ ಎಬ್ಬಿಸುವ ದಿನದಂದು ನನಗೆ ಅವಮಾನ ಮಾಡಬೇಡ. 88. ಅಂದರೆ, ಆಸ್ತಿ ಮತ್ತು ಮಕ್ಕಳು ಯಾವುದೇ ಉಪಕಾರ ಮಾಡದ ದಿನ! 89. ಪಾಪಮುಕ್ತ ಹೃದಯದೊಂದಿಗೆ ಅಲ್ಲಾಹನ ಬಳಿ ಬರುವವನ ಹೊರತು. 90. ದೇವಭಯವುಳ್ಳವರಿಗೆ ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು. 91. ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು. 92. ಅವರೊಡನೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದವರು ಎಲ್ಲಿ ಹೋದರು? 93. ಅಲ್ಲಾಹನನ್ನು ಬಿಟ್ಟು. ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಅಥವಾ ಅವರು ಅವರಿಗೇ ಸಹಾಯ ಮಾಡುವರೇ?” 94. ಆದ್ದರಿಂದ ಅವರನ್ನು (ಆ ದೇವರುಗಳನ್ನು) ಮತ್ತು ದುರ್ಮಾರ್ಗಿಗಳನ್ನು ನರಕಾಗ್ನಿಗೆ ತಲೆಕೆಳಗಾಗಿ ಎಸೆಯಲಾಗುವುದು. 95. ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು. 96. ಅಲ್ಲಿ ಅವರು ಪರಸ್ಪರ ತರ್ಕಿಸುತ್ತಾ ಹೇಳುವರು: 97. “ಅಲ್ಲಾಹನಾಣೆ! ನಿಜಕ್ಕೂ ನಾವು ಸ್ಪಷ್ಟವಾಗಿ ದಾರಿತಪ್ಪಿದ್ದೆವು. 98. ನಾವು ನಿಮ್ಮನ್ನು ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಸಮಾನರೆಂದು ಕಲ್ಪಿಸಿದಾಗ. 99. ಆ ಅಪರಾಧಿಗಳೇ ನಮ್ಮನ್ನು ದಾರಿತಪ್ಪಿಸಿದ್ದು. 100. ಈಗ ನಮಗೆ ಶಿಫಾರಸು ಮಾಡಲು ಯಾರೂ ಇಲ್ಲ. 101. ಆತ್ಮೀಯ ಮಿತ್ರರೂ ಇಲ್ಲ. 102. ನಮಗೆ (ಇಹಲೋಕಕ್ಕೆ) ಮರಳಿ ಹೋಗುವ ಒಂದು ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.” 103. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ. 104. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

- Kannada Translation - Hamza Butur

Teruskan Membaca

Nota dan Refleksi

Anda tidak mempunyai sebarang nota atau renungan tentang ayat ini.

Notes placeholders

Kekal Terhubung dengan Al-Quran ❤️

Peringatan ringkas yang bermakna untuk menetapkan semula, merenung dan kekal terhubung dengan al-Quran.

Baca, Dengar, Cari, dan Renungkan Al-Quran

Quran.com ialah platform dipercayai yang digunakan oleh berjuta-juta orang di seluruh dunia untuk membaca, mencari, mendengar dan merenung Al-Quran dalam pelbagai bahasa. Ia menyediakan terjemahan, tafsir, bacaan, terjemahan perkataan demi perkataan, dan alat untuk kajian yang lebih mendalam, menjadikan al-Quran boleh diakses oleh semua orang.

Sebagai Sadaqah Jariyah, Quran.com berdedikasi untuk membantu orang ramai berhubung secara mendalam dengan al-Quran. Disokong oleh Quran.Foundation , sebuah organisasi bukan untung 501(c)(3), Quran.com terus berkembang sebagai sumber percuma dan berharga untuk semua, Alhamdulillah.

Navigasi
Halaman Utama
Radio Al-Quran
Qari
Tentang Kami
Pemaju (Developers)
Kemas kini produk
Maklum balas
Bantuan
Derma
Projek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projek tanpa untung yang dimiliki, diurus atau ditaja oleh Quran.Foundation
Pautan yang di gemari
Doa-doa daripada Al-Quran
Ayat Al-Quran Hari Ini
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Peta lamanPrivasiTerma dan Syarat
© 2026 Quran.com. Hak cipta terpelihara
Sumbangan