Iniciar sesión
Iniciar sesión
Iniciar sesión
Seleccionar idioma

Ash-Shuará 26:14 ولهم علي ذنب فاخاف ان يقتلون ١٤

Página 367 · Juz 19

وَلَهُمۡ
عَلَيَّ
ذَنۢبٞ
فَأَخَافُ
أَن
يَقۡتُلُونِ
١٤
ಮಾತ್ರವಲ್ಲ ಅವರಿಗೆ ನನ್ನ ಮೇಲೆ ಒಂದು ಅಪ ರಾಧದ ಆರೋಪವಿದೆ. ಆದುದರಿಂದ ಅವರು ನನ್ನನ್ನು ಕೊಂದು ಬಿಡುವರೆಂದು ನಾನು ಹೆದರುತ್ತೇನೆ’’.
Continuar leyendo

Lee Tafsir

Ibn Kathir (Abridged)

Between Musa and Fir`awn

Allah tells us what He commanded His servant, son of `Imran and Messenger Musa, peace be upon him, who spoke with Him, to do, when He called him from the right side of the mountain, and conversed with him, and chose him, sent him, and commanded him to go to Fir`awn and his pe

…

Between Musa and Fir`awn

Allah tells us what He commanded His servant, son of `Imran and Messenger Musa, peace be upon him, who spoke with Him, to do,

…
Ver Tafsires

Leer en contexto

10. ನಿನ್ನ ಪ್ರಭು ಮೂಸಾರನ್ನು ಕರೆದು “ನೀವು ಅಕ್ರಮಿ ಜನಾಂಗದ ಅಂದರೆ ಫಿರ್‍ಔನನ ಜನಾಂಗದ ಕಡೆಗೆ ಹೋಗಿರಿ” ಹೇಳಿದ ಸಂದರ್ಭವನ್ನು ನೆನಪಿಸಿರಿ. 11. ಅಂದರೆ ಫಿರ್‍ಔನನ ಜನಾಂಗದ ಕಡೆಗೆ. ‘ಅವರು ಅಲ್ಲಾಹನನ್ನು ಭಯ ಪಡುವುದಿಲ್ಲವೇ?’ ಎಂದು ಕೇಳಿರಿ”. 12. ಆಗ ಅವರು ಹೇಳಿದರು, `ನನ್ನ ಪ್ರಭೂ, ಅವರು ನನ್ನನ್ನು ಸುಳ್ಳಾಗಿಸುವರೆಂಬ ಭಯ ನನಗಿದೆ. 13. ನನ್ನ ಎದೆ ಮುದುಡುತ್ತಿದೆ. ನನ್ನ ನಾಲಿಗೆ ಚಲಿಸು ವುದಿಲ್ಲ. ಆದ್ದರಿಂದ ಹಾರೂನರಿಗೂ ಸಂದೇಶ ಕಳುಹಿಸು. 14. ಮಾತ್ರವಲ್ಲ ಅವರಿಗೆ ನನ್ನ ಮೇಲೆ ಒಂದು ಅಪ ರಾಧದ ಆರೋಪವಿದೆ. ಆದುದರಿಂದ ಅವರು ನನ್ನನ್ನು ಕೊಂದು ಬಿಡುವರೆಂದು ನಾನು ಹೆದರುತ್ತೇನೆ’’. 15. ಆಗ ಅಲ್ಲಾಹನು ಹೇಳಿದನು; `ಖಂಡಿತ ಅದೇನೂ ನಡೆಯದು. ನೀವಿಬ್ಬರೂ ನಮ್ಮ ನಿದರ್ಶನಗಳನ್ನು ತೆಗೆದುಕೊಂಡು ಹೋಗಿರಿ. ನಾವು ನಿಮ್ಮೊಂದಿಗೇ ಇದ್ದೇವೆ. ಎಲ್ಲವನ್ನೂ ಆಲಿಸುತ್ತಿದ್ದೇವೆ. 16. ಫಿರ್‍ಔನನ ಬಳಿಗೆ ಹೋಗಿರಿ. ಆಮೇಲೆ ಹೀಗೆ ಹೇಳಿರಿ; ಸರ್ವ ಜಗತ್ತಿನ ಪ್ರಭು ಅಲ್ಲಾಹನ ದೂತರು ನಾವು. 17. ನೀನು ಇಸ್ರಾಈಲ ಜನಾಂಗವನ್ನು ನಮ್ಮ ಜೊತೆ ಕಳುಹಿಸಿಕೊಡು. 18. ಫಿರ್‍ಔನನು ಹೇಳಿದನು; “ನೀನು ಮಗುವಾಗಿ ದ್ದಾಗ ನಮ್ಮ ಜೊತೆಗೆ ನೆಲೆಗೊಟ್ಟು ನಾವು ನಿನ್ನನ್ನು ಸಾಕಿರಲಿಲ್ಲವೇ? ನಿನ್ನ ಜೀವಮಾನದ ಅನೇಕ ವರ್ಷಗಳನ್ನು ನೀನು ನಮ್ಮಲ್ಲಿ ಕಳೆದಿರುವೆ. 19. ಅನಂತರ ನೀನು ಮಾಡುವುದೆಲ್ಲವನ್ನೂ ಮಾಡಿದೆ. ನೀನು ಮಹಾಕೃತಘ್ನನಾಗಿರುವೆ’’. 20. ಆಗ ಮೂಸಾ ಹೇಳಿದರು; “ನಾನು ಆಗ ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಅಂದು ನಾನು ಅಜ್ಞರಲ್ಲಿ ಸೇರಿದ್ದೆ. 21. ತರುವಾಯ ನಾನು ನಿಮಗೆ ಹೆದರಿ ಓಡಿಹೋದೆ. ಆ ಬಳಿಕ ನನ್ನ ಪ್ರಭು ನನಗೆ ವಿಜ್ಞಾನವನ್ನು ದಯಪಾಲಿಸಿದನು. ನನ್ನನ್ನು ಸಂದೇಶವಾಹಕ ರಲ್ಲಿ ಸೇರಿಸಿದನು. 22. ನೀನು ಇಸ್ರಾಈಲ ಜನಾಂಗವನ್ನು ಗುಲಾಮರನ್ನಾಗಿ ಮಾಡಿಕೊಂಡದ್ದೇ ನೀನು ನನಗೆ ಮಾಡಿದ ಉಪಕಾರ” . 23. ಫಿರ್‍ಔನನು ‘ಸರ್ವ ಜಗತ್ತಿನ ಪ್ರಭು ಎಂದ ರೇನು?’ ಎಂದು ಕೇಳಿದನು. 24. ಮೂಸಾ `ಭೂಮಿ-ಆಕಾಶಗಳ ಪ್ರಭು ಮತ್ತು ಅವುಗಳ ನಡುವೆ ಇರುವ ಸಕಲದರ ಪ್ರಭು. ನೀವು ದೃಢವಿಶ್ವಾಸವಿರಿಸುವವರಾಗಿದ್ದರೆ’, ಎಂದು ಹೇಳಿದರು. 25. ಫಿರ್‍ಔನನು ತನ್ನ ಸುತ್ತಮುತ್ತಲಿದ್ದ ಜನರೊಡನೆ `ಇವನು ಹೇಳುತ್ತಿರುವುದನ್ನು ನೀವು ಸರಿಯಾಗಿ ಕೇಳಿದಿರಾ?’ ಎಂದನು. 26. ಆಗ ಮೂಸಾ `ನಿಮ್ಮ ಪ್ರಭುವೂ ಗತಿಸಿ ಹೋಗಿರುವ ನಿಮ್ಮ ಪೂರ್ವಿಕರ ಪ್ರಭುವೂ’ ಎಂದರು. 27. ಫಿರ್‍ಔನನು ``ನಿಮ್ಮ ಕಡೆಗೆ ಕಳುಹಿಸಲ್ಪಟ್ಟಿರುವ ನಿಮ್ಮ ದೂತರು ಖಂಡಿತ ಹುಚ್ಚರು’’ ಎಂದನು. 28. ಆಗ ಮೂಸಾ `ಪೂರ್ವ, ಪಶ್ಚಿಮ ಮತ್ತು ಅವೆರಡರ ನಡುವೆ ಇರುವುದರ ಪ್ರಭು. ನೀವು ಯೋಚಿಸ ಬಲ್ಲವರಾಗಿದ್ದರೆ’ ಎಂದರು. 29. ಆಗ ಫಿರ್‍ಔನನು, “ನನ್ನ ಹೊರತು ಬೇರೆ ದೇವನನ್ನುಂ ನೀನು ಸ್ವೀಕರಿಸಿದರೆ ಬಂಧಿಸಲ್ಪಟ್ಟ ಕೈದಿಗಳೊಂದಿಗೆ ನಿನ್ನನ್ನು ಜೈಲಿಗೆ ತಳ್ಳುವೆನು’’ ಎಂದು ಹೇಳಿದನು. 30. ಆಗ ಮೂಸಾ ‘ನಾನು ಒಂದು ಸುಸ್ಪಷ್ಟವಾದ ದೃಷ್ಟಾಂತವನ್ನು ನಿನಗೆ ತಂದರೂ ನೀನು ಒಪ್ಪುವುದಿಲ್ಲವೇ?’ ಎಂದು ಕೇಳಿದರು. 31. ಆಗ ಫಿರ್‍ಔನನು, `ನೀನು ಸತ್ಯವಾದಿಯಾಗಿದ್ದರೆ ಅದನ್ನು ತಂದು ತೋರಿಸು’ ಎಂದನು. 32. ಮೂಸಾ ತಮ್ಮ ದಂಡವನ್ನು ನೆಲಕ್ಕೆಸೆದರು. ಅದು ಹಠಾತ್ತನೆ ಒಂದು ಪ್ರತ್ಯಕ್ಷ ಹೆಬ್ಬಾವಾಗಿ ಮಾರ್ಪಟ್ಟಿತು. 33. ತರುವಾಯ ಅವರು ತಮ್ಮ ಹಸ್ತವನ್ನು ಬಗಲಿನಿಂದ ಹೊರಕ್ಕೆಳೆದರು. ಆಗ ಅದು ಪ್ರೇಕ್ಷಕರ ಮುಂದೆ ಬೆಳ್ಳಗಾಗಿ ತೋರುತ್ತಿತ್ತು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir