Log masuk
Log masuk
Log masuk
Pilih Bahasa

Faatir 35:33 جنات عدن يدخلونها يحلون فيها من اساور من ذهب ولولوا ولباسهم فيها حرير ٣٣

Halaman 438 · Juz 22

جَنَّٰتُ
عَدۡنٖ
يَدۡخُلُونَهَا
يُحَلَّوۡنَ
فِيهَا
مِنۡ
أَسَاوِرَ
مِن
ذَهَبٖ
وَلُؤۡلُؤٗاۖ
وَلِبَاسُهُمۡ
فِيهَا
حَرِيرٞ
٣٣
ಅವರು ಶಾಶ್ವತ ವಾಸದ ಸ್ವರ್ಗೋದ್ಯಾನಗಳನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರ ಮತ್ತು ಮುತ್ತಿನ ಕಡಗಗಳ್ನು ತೊಡಿಸಲಾಗುವುದು. ಅಲ್ಲಿ ಅವರ ಪೋಷಾಕು ರೇಷ್ಮೆಯಾಗಿರುವುದು.
reading-goal:continue-reading

Baca q-and-a.tafsir

Ibn Kathir (Abridged)

يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤاً

(therein will they be adorned with bracelets of gold and pearls,) It was recorded in the Sahih from Abu Hurayrah, may Allah be pleased with him, that the Messenger of Allah ﷺ said:

«تَبْلُغُ الْحِلْيَةُ مِنَ الْمُؤْمِنِ حَيْثُ يَبْلُغُ الْوَضُوء

…

يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤاً

(therein will they be adorned with bracelets of gold and pearls,) It was recorded in the Sahih

…
Lihat tafsirs

Baca related-content

27. ಅಲ್ಲಾಹು ಆಕಾಶದಿಂದ ಮಳೆ ಸುರಿಸುವುದನ್ನು ನೀವು ನೋಡಿಲ್ಲವೇ? ನಂತರ ನಾವು ಅದರಿಂದ ವಿಭಿನ್ನ ಬಣ್ಣಗಳಿರುವ ಹಣ್ಣುಗಳನ್ನು ಉತ್ಪಾದಿಸಿದೆವು. ಪರ್ವತಗಳಲ್ಲಿ ಬಳಿ ಮತ್ತು ಕೆಂಪು ವರ್ಣವೈವಿಧ್ಯತೆಗಳಿರುವ ರಸ್ತೆಗಳಿವೆ. ಕೆಲವು ಕಡುಗಪ್ಪು ಬಣ್ಣವನ್ನು ಹೊಂದಿವೆ. 28. ಅದೇ ರೀತಿ ಮನುಷ್ಯರು, ಜೀವರಾಶಿಗಳು ಮತ್ತು ಜಾನುವಾರುಗಳಲ್ಲೂ ವಿಭಿನ್ನ ಬಣ್ಣಗಳಿವೆ. ಅಲ್ಲಾಹನ ದಾಸರಲ್ಲಿ ಜ್ಞಾನವಂತರು ಮಾತ್ರ ಅವನನ್ನು ಭಯಪಡುತ್ತಾರೆ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ. 29. ನಿಶ್ಚಯವಾಗಿಯೂ ಅಲ್ಲಾಹನ ಗ್ರಂಥವನ್ನು ಪಠಿಸುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ನಾವು ನೀಡಿದ ಸಂಪತ್ತಿನಿಂದ ರಹಸ್ಯವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡುವವರು ಯಾರೋ—ಅವರು ಎಂದಿಗೂ ನಷ್ಟವಾಗದ ವ್ಯಾಪಾರವನ್ನು ಬಯಸುತ್ತಾರೆ. 30. ಅವನು ಅವರಿಗೆ ಅವರ ಪೂರ್ಣ ಪ್ರತಿಫಲವನ್ನು ನೀಡಲೆಂದು ಮತ್ತು ಅವನ ಔದಾರ್ಯದಿಂದ ಅದಕ್ಕಿಂತಲೂ ಹೆಚ್ಚು ನೀಡಲೆಂದು. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ. 31. ನಾವು ನಿಮಗೆ ದೇವವಾಣಿಯ ಮೂಲಕ ನೀಡಿದ ಈ ಗ್ರಂಥವು ಸಂಪೂರ್ಣ ಸತ್ಯವಾಗಿದೆ. ಅದು ಅದಕ್ಕಿಂತ ಮೊದಲಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ನಿಶ್ಚಯವಾಗಿಯೂ ಅಲ್ಲಾಹು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿಯುವವನು ಮತ್ತು ನೋಡುವವನಾಗಿದ್ದಾನೆ. 32. ನಂತರ ನಮ್ಮ ದಾಸರಲ್ಲಿ ನಾವು ಆರಿಸಿದವರಿಗೆ ನಾವು ಗ್ರಂಥವನ್ನು ಉತ್ತರಾಧಿಕಾರವಾಗಿ ನೀಡಿದೆವು. ಅವರಲ್ಲಿ ಸ್ವಯಂ ಅಕ್ರಮವೆಸಗಿದವರು, ಮಧ್ಯಮ ನಿಲುವನ್ನು ಹೊಂದಿದವರು ಮತ್ತು ಅಲ್ಲಾಹನ ಅಪ್ಪಣೆಯಂತೆ ಸತ್ಕರ್ಮವೆಸಗುವುದರಲ್ಲಿ ಮುಂಚೂಣಿಯಲ್ಲಿರುವವರು ಇದ್ದಾರೆ. ಅದೇ ಅತಿದೊಡ್ಡ ಔದಾರ್ಯ. 33. ಅವರು ಶಾಶ್ವತ ವಾಸದ ಸ್ವರ್ಗೋದ್ಯಾನಗಳನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರ ಮತ್ತು ಮುತ್ತಿನ ಕಡಗಗಳ್ನು ತೊಡಿಸಲಾಗುವುದು. ಅಲ್ಲಿ ಅವರ ಪೋಷಾಕು ರೇಷ್ಮೆಯಾಗಿರುವುದು. 34. ಅವರು ಹೇಳುವರು: “ನಮ್ಮಿಂದ ವ್ಯಥೆಯನ್ನು ನಿವಾರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ನಿಶ್ಚಯವಾಗಿಯೂ ನಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ. 35. ಅವನು ತನ್ನ ಔದಾರ್ಯದಿಂದ ನಮಗೆ ಶಾಶ್ವತ ವಾಸದ ಸ್ಥಳದಲ್ಲಿ (ಸ್ವರ್ಗದಲ್ಲಿ) ವಾಸ್ತವ್ಯಗೊಳಿಸಿದ್ದಾನೆ. ಇಲ್ಲಿ ನಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇಲ್ಲಿ ನಮಗೆ ಯಾವುದೇ ಸುಸ್ತು ಕೂಡ ಉಂಟಾಗುವುದಿಲ್ಲ.” 36. ಸತ್ಯನಿಷೇಧಿಗಳು ಯಾರೋ—ಅವರಿಗೆ ನರಕಾಗ್ನಿಯಿದೆ. ಅವರಿಗೆ ಸಾವನ್ನು ವಿಧಿಸಲಾಗುವುದಿಲ್ಲ. ಹಾಗಿದ್ದರೆ ಅವರಿಗೆ ಸಾಯಬಹುದಾಗಿತ್ತು. ನರಕದ ಶಿಕ್ಷೆಯಲ್ಲಿ ಅವರಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ನಾವು ಎಲ್ಲಾ ಕೃತಘ್ನರಿಗೂ ಈ ರೀತಿ ಪತಿಫಲ ನೀಡುತ್ತೇವೆ. 37. ಅಲ್ಲಿ ಅವರು ಕಿರಿಚುತ್ತಾ ಹೇಳುವರು: “ನಮ್ಮ ಪರಿಪಾಲಕನೇ! ನಮ್ಮನ್ನು ಇಲ್ಲಿಂದ ಹೊರಗೆ ಬಿಡು. ನಾವು ಸತ್ಕರ್ಮಗಳನ್ನು ಮಾಡುತ್ತೇವೆ. ನಾವು ಮಾಡುತ್ತಿದ್ದ ಕರ್ಮಗಳಲ್ಲದ ಬೇರೆ ಕರ್ಮಗಳನ್ನು ಮಾಡುತ್ತೇವೆ.” (ಅಲ್ಲಾಹು ಹೇಳುವನು): “ಉಪದೇಶವನ್ನು ಸ್ವೀಕರಿಸಲು ಬಯಸುವವರಿಗೆ ಉಪದೇಶವನ್ನು ಸ್ವೀಕರಿಸಲು ಸಾಕಾಗುವಷ್ಟು ಆಯುಷ್ಯವನ್ನು ನಾವು ನಿಮಗೆ ನೀಡಿರಲಿಲ್ಲವೇ? ಎಚ್ಚರಿಕೆ ನೀಡುವವರು (ಪ್ರವಾದಿಗಳು) ಕೂಡ ನಿಮ್ಮ ಬಳಿಗೆ ಬಂದಿದ್ದರು. ಆದ್ದರಿಂದ ನೀವು ಅದರ ರುಚಿಯನ್ನು ನೋಡಿರಿ. ಅಕ್ರಮಿಗಳಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.”

- Kannada Translation - Hamza Butur

reading-goal:continue-reading

Nota dan Renungan

reflection-not-available

Notes placeholders

Kekal Terhubung dengan Al-Quran ❤️

Peringatan ringkas yang bermakna untuk menetapkan semula, merenung dan kekal terhubung dengan al-Quran.

Baca, Dengar, Cari, dan Renungkan Al-Quran

Quran.com ialah platform dipercayai yang digunakan oleh berjuta-juta orang di seluruh dunia untuk membaca, mencari, mendengar dan merenung Al-Quran dalam pelbagai bahasa. Ia menyediakan terjemahan, tafsir, bacaan, terjemahan perkataan demi perkataan, dan alat untuk kajian yang lebih mendalam, menjadikan al-Quran boleh diakses oleh semua orang.

Sebagai Sadaqah Jariyah, Quran.com berdedikasi untuk membantu orang ramai berhubung secara mendalam dengan al-Quran. Disokong oleh Quran.Foundation , sebuah organisasi bukan untung 501(c)(3), Quran.com terus berkembang sebagai sumber percuma dan berharga untuk semua, Alhamdulillah.

Navigasi
Halaman Utama
Radio Al-Quran
Qari
Tentang Kami
Pemaju (Developers)
Kemas kini produk
Maklum balas
Bantuan
Derma
Projek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projek tanpa untung yang dimiliki, diurus atau ditaja oleh Quran.Foundation
Pautan yang di gemari
Doa-doa daripada Al-Quran
Ayat Al-Quran Hari Ini
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Peta lamanPrivasiTerma dan Syarat
© 2026 Quran.com. Hak cipta terpelihara
Sumbangan